ರಾಣೆಬೆನ್ನೂರ: ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿದ ಘಟನೆ ನಗರದ ಹೊರವಲಯದ ಬೆನಕನಕೊಂಡ ರಸ್ತೆ ಬಳಿ ನಡೆದಿದೆ.
ಧಾರವಾಡದ ನವೀನ್ ಸುಭಾಸ ಶಲವಡಿ, ಜುಬೇರ ಬಂಧಿತ ಆರೋಪಿಗಳು.
ಇವರು ಬೈಕ್ ಮೇಲೆ ಕುಳಿತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 236 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.