ಬ್ಯಾಡಗಿ ತಾಲೂಕಿನ ತಡಸ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ hot meal school ಸೇವಿಸಿದ ತಾಪಂ ಇಒ ಮಲ್ಲಿಕಾರ್ಜುನ. 
ಹಾವೇರಿ

ತಡಸ ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ತಾಪಂ ಇಒ hot meal school

15 ದಿನಗಳ ಹಿಂದೆ ನುಸಿಗಳು ಕಾಣಿಸಿಕೊಂಡಿವೆ ಎನ್ನುವುದನ್ನು ಹೇಳುತ್ತೀರಿ. ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆಕಸ್ಮಿಕವಾಗಿ ನುಸಿ ಉಂಟಾದಲ್ಲಿ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿ ಸ್ವಚ್ಛಗೊಳಿಸಿ ಆಹಾರ ತಯಾರಿಸುವ ಜವಾಬ್ದಾರಿ ನಿಮ್ಮದಲ್ಲವೇ ಎಂದು ಪ್ರಶ್ನಿಸಿದ ಇಒ ಕೆ.ಎಂ. ಮಲ್ಲಿಕಾರ್ಜುನ, ಇಂತಹ ಘಟನೆಗಳು ಜರುಗಿದಾಗ ಮುಖ್ಯ ಶಿಕ್ಷಕರು ಹಾಗೂ ಅಡುಗೆ ಕಾರ್ಯಕರ್ತೆಯರೇ ಹೊಣೆಯಾಗಬೇಕಿದೆ. ಇನ್ನುಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.