ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣಗಳೊಂದಿಗೆ ಆಡೂರು ಠಾಣೆ ಪೊಲೀಸ್ ಅಧಿಕಾರಿಗಳು.  
ಹಾವೇರಿ

ಕಳ್ಳನ ಬಂಧನ; ಆಭರಣ ವಶ thief

ವೀರೇಶ ಸೌದ್ರಿ
ಹಾನಗಲ್ಲ: ತಾಲೂಕಿನ ಸೋಮಾಪುರ ಗ್ರಾಮದ ಮನೆಯೊಂದರಲ್ಲಿ ಅಂದಾಜು 14 ಲಕ್ಷ ರೂ. ಮೌಲ್ಯದ ಆಭರಣ ಕದ್ದ ಆರೋಪಿಯನ್ನು ಆಡೂರು ಪೊಲೀಸ್ ಠಾಣೆಯ ಪೊಲಿಸರು 48 ಗಂಟೆಗಳಲ್ಲಿ ಬಂಧಿಸಿದ್ದಾರೆ. 
ಶರಣಪ್ಪ ದೊಡ್ಡಬಸಪ್ಪ ಮುದಿಯಪ್ಪನವರ (32) ಬಂಧಿತ ಆರೋಪಿ. ಆರೋಪಿಯಿಂದ ಚಿನ್ನದ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 
ಜ. 19ರಂದು ರಾತ್ರಿ ಗ್ರಾಮದ ಬಸವರಾಜ ಗೂಳಪ್ಪ ಪೂಜಾರ ಎಂಬುವವರ ಮನೆಯ ಹಿಂಬಾಗಿಲು ಮುರಿದು ಕಳವು ಮಾಡಲಾಗಿತ್ತು. ಹಾವೇರಿ ಎಸ್‌ಪಿ ಯಶೋಧಾ ಒಂಟಗೋಡಿ, ಎಎಸ್‌ಪಿ ಎಲ್.ವೈ. ಶಿರಕೋಳ, ಡಿವೈಎಸ್‌ಪಿ ಕೆ.ವಿ.ಗುರುಶಾಂತಪ್ಪ, ಹಾನಗಲ್ಲ ಸಿಪಿಐ ಬಸವರಾಜ ಹಳಬಣ್ಣನವರ ಅವರ ಮಾರ್ಗದರ್ಶನದಲ್ಲಿ, ಆಡೂರ ಪಿಎಸ್‌ಐ ಶರಣಪ್ಪ ಹಂಡ್ರಗಲ್, ಸಿಬ್ಬಂದಿಗಳಾದ ಎಸ್.ಎಂ,.ಕಂಬಳಿ, ಮಾರುತಿ ಹಿತ್ಲರ್, ಎಸ್.ಎಸ್.ಸುಳ್ಳಳ್ಳಿ, ಪಿ.ಬಿ.ಹೊಸಮನಿ, ಜಿ.ಡಿ.ಚವರೆಡ್ಡಿ, ಮುಕ್ತಿಯಾರ್‌ಅಹಮ್ಮದ್ ಮುಲ್ಲಾನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.