ಹಾನಗಲ್ಲಿನ ಪರಿವರ್ತನ ಕಲಿಕಾ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾಥಿರ್ಗಳಿಗೆ ಶಾಸಕ ಶ್ರೀನಿವಾಸ ಮಾನೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಪ್ರಭುಲಿಂಗ ಕೋಡದ, ಆರ್​.ವಿ. ಚಿನ್ನಿಕಟ್ಟಿ, ಮಾರುತಿ ಶಿಡ್ಲಾಪೂರ, ಬಿ.ಉಮೇಶ ಇತರರಿದ್ದರು. 
ಹಾವೇರಿ

talented youth ಪ್ರತಿಭಾವಂತ ಯುವ ಸಮುದಾಯವೇ ದೇಶದ ಭವಿಷ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶ್ರೀನಿವಾಸ ಮಾನೆ ಅಭಿಪ್ರಾಯ
  • ಹಾನಗಲ್ಲದಲ್ಲಿ ಸಾಧನಾ ಸಂಭ್ರಮ
ಹಾನಗಲ್ಲ: ಭಾರತೀಯರ ಬುದ್ಧಿವಂತಿಕೆ, ವಿವೇಕವನ್ನು ಒಡೆದು ಆಳಿ, ಬಿಟ್ಟು ಹೋದ ಬ್ರಿಟಿಷರ ಕುತಂತ್ರ ವಿಚಾರಗಳಿಂದ ಮುಕ್ತಿ ಸಿಕ್ಕರೆ ಮಾತ್ರ ಭಾರತ ವಿಶ್ವನಾಯಕನಾಗಲು ಸಾಧ್ಯವಿದೆ. ಪ್ರತಿಭಾವಂತ ಯುವ ಸಮುದಾಯವೇ ದೇಶದ ಭವಿಷ್ಯ. ತಮ್ಮ ಹಿತದೊಂದಿಗೆ ದೇಶದ ಹಿತವನ್ನೂ ಧ್ಯೇಯವಾಗಿಟ್ಟುಕೊಳ್ಳಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಪಟ್ಟಣದ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ಪರಿವರ್ತನಾ ಕಲಿಕಾ ಕೇಂದ್ರ ಶನಿವಾರ ಆಯೋಜಿಸಿದ್ದ ಹಾನಗಲ್ಲ ತಾಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಇಡಿ, ಸ್ನಾತಕೋತ್ತರ ಹಾಗೂ ಎನ್​ಎಂಎಂಎಸ್​ ಟಾಪರ್​ ವಿದ್ಯಾಥಿರ್ಗಳು ಹಾಗೂ 3ನೇ ವರ್ಷದ ಸಾಧನಾ ಸಂಭ್ರಮದಲ್ಲಿ ತಾಲೂಕಿನ 375 ವಿದ್ಯಾಥಿರ್ಗಳನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು. ಭಾರತೀಯರ ಬುದ್ಧಿವಂತಿಕೆಗೆಗೆ ಜಗತ್ತೇ ಬೆರಗಾಗಿದೆ. ಅಮೆರಿಕಾ ಬೆಳವಣಿಗೆಯಲ್ಲಿ ಭಾರತೀಯ ಬುದ್ಧಿವಂತಿಕೆ ಕೆಲಸ ಮಾಡಿದೆ. ಆದರೆ, ನೆರೆ ದೇಶಗಳು ಭಾರತದ ಪ್ರಗತಿ ಕುಂಠಿತಗೊಳಿಸುವ ಹುನ್ನಾರದಲ್ಲಿವೆ. ವಿದೇಶಿ ಷಡ್ಯಂತ್ರಕ್ಕೆ ಬಲಿಯಾಗುವುದು ಬೇಡ. ನಾವು ಕೃಷಿ ೇತ್ರದಲ್ಲಿಯೂ ಅಭಿವೃದ್ಧಿ ಪಥದತ್ತ ಸಾಗುವ ಅಗತ್ಯವಿದೆ. ಸಮಾಜದ ಪ್ರೇರಣೆ, ಸಹಾಯ, ಸಹಕಾರದಿಂದ ಉನ್ನತ ಸ್ಥಾನಮಾನಗಳನ್ನು ತಮ್ಮದಾಗಿಸಿಕೊಂಡವರು ಅದರ ಕೊಡುಗೆಯಾಗಿ ಸಮಾಜಕ್ಕೆ ಸಹಾಯ ಮಾಡಬೇಕು ಎಂದ ಅವರು, ಗ್ರಾಮೀಣ ಮಕ್ಕಳಿಗೆ ಉನ್ನತ ಶೈಣಿಕ ವ್ಯವಸ್ಥೆ ಕಲ್ಪಿಸುವುದು ನನ್ನ ಆದ್ಯತೆ. ಅದಕ್ಕಾಗಿ ನಾನು ಬದ್ಧ ಎಂದರು.
ರಾಣೆಬೆನ್ನೂರು ಸಂಜೀವಿನಿ ಪದವಿಪೂರ್ವ ಕಾಲೇಜ್​ನ ಪ್ರಾಚಾರ್ಯ ಪ್ರೊ. ಪ್ರಭುಲಿಂಗ ಕೋಡದ ಮಾತನಾಡಿ, ಶಿಣ ಬದುಕನ್ನು ರೂಪಿಸುವ ಒಂದು ಶ್ರದ್ಧಾತ್ಮಕ ಅಧ್ಯಯನ. ಈಗ ಶೈಣಿಕ ಕ್ರಾಂತಿ ಆರಂಭವಾಗಿದೆ. ಪರಿಶ್ರಮಕ್ಕೆ ಲ ಇದ್ದೇ ಇರುತ್ತದೆ ಎಂದರು.
ಪ್ರತಿಭಾ ಪುರಸ್ಕಾರ ಪಡೆದ ಪ್ರಿಯಾ ಹರವಿ, ಸಿಂಧೂ ಪವಾರ, ಅನುಷಾ ಹೊನ್ನಮ್ಮನವರ, ಮುಸ್ತಕಿಯಾ ಬಂಕಾಪುರ ಮಾತನಾಡಿದರು. ಬಿಇಒ ಆರ್​.ವಿ. ಚಿನ್ನಿಕಟ್ಟಿ ಸಂವಿಧಾನ ಪೀಠಿಕೆ ಓದಿದರು. ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ, ತಾಲೂಕು ಎಸ್ಸೆಸ್ಸೆಲ್ಸಿ ನೋಡಲ್​ ಅಧಿಕಾರಿ ಬಿ.ಉಮೇಶ ಇತರರಿದ್ದರು. ರೆಹಾನಾ ಹಿತ್ತಲಮನಿ ಪ್ರಾಥಿರ್ಸಿದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿದರು.

ಎಲ್ಲರಿಗೂ ಅವರವರ ಧರ್ಮಾಚರಣೆಯಲ್ಲಿ ಶ್ರದ್ಧೆ ಇದ್ದೆ ಇದೆ. ನಾನೂ ಕೂಡ ಹಿಂದೂ. ನನ್ನ ಕುಟುಂಬ ಸಂಸ್ಕಾರದ ಆಚರಣೆಗಳು ನನ್ನ ಮನೆಯೊಳಗೆ ಆಚರಿಸಲ್ಪಡುತ್ತವೆ. ಸಾಮಾಜಿಕವಾಗಿ ನಾವೆಲ್ಲರೂ ಒಂದೇ. ನಮ್ಮ ಆಚರಣೆಗಳ ಹೆಸರಿನಲ್ಲಿ ಜಾತಿ ಧರ್ಮದ ಭೇದಕ್ಕೆ ಅವಕಾಶವಾಗುವುದು ಬೇಡ. ಶಿಣದಲ್ಲಿ ನಿಜವಾಗಿಯೂ ನಾವು ಕಲಿಯಬೇಕಾಗಿರುವುದು ಸಮಾನತೆಯ ಸಂಸ್ಕಾರವೇ ಆಗಿದೆ.

— ಶ್ರೀನಿವಾಸ ಮಾನೆ, ಶಾಸಕ