Crime 
ಹಾವೇರಿ

ದೇವಸ್ಥಾನದ ಬೀಗ ಮುರಿದು ಕಳ್ಳತನ

ಕರಿಯಪ್ಪ ಅರಳಿಕಟ್ಟಿ

ಬ್ಯಾಡಗಿ: ದೇವಸ್ಥಾನದ ಬೀಗ ಮುರಿದು ಒಳಗೆ ನುಗ್ಗಿದ ಖದೀಮರು 1.30 ಲಕ್ಷ ರೂ. ಮೌಲ್ಯದ ದೇವಿಯ ಚಿನ್ನಾಭರಣ ಮತ್ತು ಹುಂಡಿಯ ಹಣ ದೋಚಿಕೊಂಡು ಪರಾರಿಯಾದ ಘಟನೆ ತಾಲೂಕಿನ ಕದರಮಂಡಲಗಿ ರಸ್ತೆಯ ಹೊನ್ನಮ್ಮದೇವಿ ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಮುರಿದು ಒಳಗೆ ನುಗ್ಗಿದ ಖದೀಮರು ದೇವಿಯ ಚಿನ್ನದ ತಾಳಿ, ಕಂಚಿನ ಗಂಟೆ, ಬೆಳ್ಳಿಯ ಗಣಪತಿ ಮೂತಿರ್ ಸೇರಿ ವಿವಿಧ 1.30 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.