ಹಂಸಭಾವಿ ಸಮೀಪದ ದೀವಿಗಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್ನೆಸ್ಸೆಸ್ ಶಿಬಿರದಲ್ಲಿ ಡಾ.ದೀಪಕ ಶಿಂಧೆ ಮಾತನಾಡಿದರು. ಡಾ. ವಿಜಯಕುಮಾರ ದಾನೇನವರ, ಸುಭಾಸ ಬೆಳವಲಕೋನಿ, ಡಾ. ಬಸವ್ವ ಹಮ್ಮಿಣಿ, ಡಾ. ಲೋಕೇಶ ಬಿ., ಮಹೇಂದ್ರ ಎಲಿ ಇತರರಿದ್ದರು.
ಹಂಸಭಾವಿ: ಸಾಂಕ್ರಾಮಿಕ ರೋಗಗಳು ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಮತ್ತು ಪರಾವಲಂಬಿಗಳಿಂದ ಹರಡುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳ ಹರಡುವಿಕೆ ವೇಗವಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಹೀಗಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಡಾ. ದೀಪಕ್ ಶಿಂಧೆ ಹೇಳಿದರು.
ಸಮೀಪದ ದೀವಿಗಿಹಳ್ಳಿ ಗ್ರಾಮದಲ್ಲಿ ಮಹಾಂತಸ್ವಾಮಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿರುವ ಎನ್ನೆಸ್ಸೆಸ್ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ಡಾ. ಶೋಭಾ ಸಿ.ಕೆ. ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಸುಭಾಸ ಬೆಳವಲಕೋನಿ ಮಾತನಾಡಿ, ಸಾರ್ವಜನಿಕರು ರೋಗಗಳ ಬಗ್ಗೆ ಸರಿಯಾದ ತಿಳಿವಳಿಕೆ ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ವಿಜಯಕುಮಾರ ದಾನೇನವರ ಮಾತನಾಡಿ, ಆರೋಗ್ಯವೇ ಭಾಗ್ಯ. ಹಿತಮಿತವಾದ ಮತ್ತು ಪೌಷ್ಟಿಕ ಆಹಾರ ಸೇವನೆ ಹಾಗೂ ನಿತ್ಯ ದೈಹಿಕ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯ ಹೊಂದಬಹುದು ಎಂದು ಸಲಹೆ ನೀಡಿದರು.
ಎನ್ನೆಸ್ಸೆಸ್ ಸಹ ಅಧಿಕಾರಿಗಳಾದ ಡಾ. ಬಸವ್ವ ಹಮ್ಮಿಣಿ, ಡಾ. ಲೋಕೇಶ ಬಿ. ಮತ್ತು ಮಹೇಂದ್ರ ಎಲಿ ಇತರರು ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಅಧಿಕಾರಿ ವೆಂಕಟೇಶ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಿ ಹಿರೇಮಠ, ಮಂಗಳಾ ನಾಗಪ್ಪನವರ ಹಾಗೂ ಪ್ರಗತಿ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು. ಎಲಿ ಇತರರಿದ್ದರು.