ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ರಾಗಿ ಬೆಳೆಯನ್ನು ಕಣದಲ್ಲಿ ಸಂಗ್ರಹಿಸಿ ಇಟ್ಟಿರುವುದು. Support price
ಹಿರೇಕೆರೂರ: ಮೆಕ್ಕೆಜೋಳದ ಬೆಲೆ ಕುಸಿತದಿಂದ ಕಂಗಾಲಾಗಿ ಪರ್ಯಾಯವಾಗಿ ರಾಗಿ ಬೆಳೆದಿದ್ದ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ ರೈತರು ಈಗ ಸೂಕ್ತ ಮಾರುಕಟ್ಟೆ (Support price) ಇಲ್ಲದೆ ಮತ್ತಷ್ಟು ಆಥಿರ್ಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಭಾಗದ ಸುಮಾರು 300ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೇಸಿಗೆ ಹಂಗಾಮಿನಲ್ಲಿ 4 ಸಾವಿರ ಕ್ವಿಂಟಾಲ್ ರಾಗಿ ಉತ್ಪಾದನೆಯಾಗಿದೆ. ಆದರೆ, ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ಗೆ 4,886 ರೂ. ಬೆಂಬಲ ಬೆಲೆಯ ಬದಲಾಗಿ, ರಾಣೆಬೆನ್ನೂರ ಮಾರುಕಟ್ಟೆಯಲ್ಲಿ ಖಾಸಗಿ ಖರೀದಿದಾರರು ಕೇವಲ 2,500ರಿಂದ 3,500 ರೂಪಾಯಿ ದರಕ್ಕೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಪ್ರತಿ ಕ್ವಿಂಟಾಲ್ಗೆ ರೈತರು ಸಾವಿರ ರೂಪಾಯಿಗೂ ಅಧಿಕ ನಷ್ಟ ಅನುಭವಿಸುವಂತಾಗಿದೆ.
ತಾಲೂಕಿನ ದೂದಿಹಳ್ಳಿ ಗ್ರಾಮದ ಭರಮಪ್ಪ ಭಂಗಿಗೌಡ್ರ, ಶಂಭು ಕಲ್ಲಪ್ಪ ಭಂಗಿಗೌಡ್ರ ಸೇರಿದಂತೆ ಹಲವು ರೈತರು ಕಟಾವು ಮಾಡಿದ ರಾಗಿಯನ್ನು ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ, ಡಿಸೆಂಬರ್ವರೆಗೆ ಮಾತ್ರ ಬೆಂಬಲ ಬೆಲೆ ಖರೀದಿಗೆ ಸೂಚನೆಯಿತ್ತು. ಈಗ ಯಾವುದೇ ಆದೇಶವಿಲ್ಲ ಎಂದು ಉತ್ತರ ನೀಡುತ್ತಿದ್ದಾರೆ. ಅಲ್ಲದೆ, ಹಾಸನ ಅಥವಾ ತುಮಕೂರು ಮಾರುಕಟ್ಟೆಗೆ ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ, ಅಲ್ಲಿನ ಎಪಿಎಂಸಿಗಳು ಸ್ಥಳಿಯ ಜಿಲ್ಲೆಯ ರೈತರಿಗೆ ಮಾತ್ರ ಆದ್ಯತೆ ನೀಡುತ್ತಿರುವುದು ಹಾವೇರಿ ಜಿಲ್ಲೆಯ ರೈತರನ್ನು ಅತಂತ್ರರನ್ನಾಗಿಸಿದೆ. ಒಂದು ವೇಳೆ ತೆಗೆದುಕೊಂಡು ಹೋಗುವುದಾದರೆ ಸಾರಿಗೆಗೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ.
ಮೊದಲೇ ಮೆಕ್ಕೆಜೋಳ ಬೆಲೆ ಕುಸಿತದಿಂದ ಕಂಗಾಲಾದ ರೈತ ಈ ಟನೆಯಿಂದ ಕಂಗೆಟ್ಟು ಹೋಗಿದ್ದು, ಬೆಂಬಲ ಬೆಲೆ ಸಿಗದೆ ಇರುವುದರಿಂದ ಭಾರಿ ನಷ್ಟ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೆಯ ಮೇಲ-ಧಿಕಾರಿಗಳು, ಜನಪ್ರತಿನಿಧಿ-ಗಳು ರಾಗಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಒಟ್ಟಿನಲ್ಲಿ ಕಷ್ಟಪಟ್ಟು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ರೈತರು ರಾಗಿ ಸಂಗ್ರಹಿಸಿಟ್ಟು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ಮಳೆಗಾಲದಲ್ಲಿ ಮೆಕ್ಕೆಜೋಳ ಕೈಕೊಟ್ಟಿದ್ದಕ್ಕೆ ಬೇಸಿಗೆಯಲ್ಲಿ ರಾಗಿ ಬೆಳೆದೆವು. ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ನೆರವಿಗೆ ಬರುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಬೇಕು.
ಮುತ್ತಣ್ಣ ನೇಶ್ವಿ, ರೈತ ದೂದಿಹಳ್ಳಿ.
ರಾಗಿ ಬೆಳೆದ ರೈತರ ಸಮಸ್ಯೆ ಕುರಿತು ಈಗಾಗಲೇ ಮೇಲಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದಿಂದ ಸೂಚನೆ ಬಂದ ತಣ ಖರೀದಿ ಕೇಂದ್ರ ಆರಂಭಿಸಲಾಗುವುದು.ಮನೋಹರ ಬಾಕಿರ್, ಎಪಿಎಂಸಿ ಕಾರ್ಯದಶಿರ್.