ಶಿಗ್ಗಾಂವಿ ತಾಲೂಕಿನ ಕೋಣನಕೇರಿಯ ವಿಎನ್​ಐಪಿ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಎಂ.ಡಿ. ವಿವೇಕ ಹೆಬ್ಬಾರ ಜತೆ ಸಭೆ ನಡೆಯಿತು. sugarcane Payment assured 
ಹಾವೇರಿ

sugarcane Payment assured ಟನ್ ಕಬ್ಬಿ​ಗೆ 2711 ರೂ. ಪಾವತಿ ಭರವಸೆ

ಬಂಕಾಪುರ: ವಿಐಎನ್​ಪಿ ಸಕ್ಕರೆ ಕಾರ್ಖಾನೆ ಹಾಗೂ ರೈತರ ಮಧ್ಯೆ ಕಬ್ಬಿನ ದರದ ಕುರಿತು ಒಮ್ಮತ ಮೂಡಿದ್ದರಿಂದ ಕಬ್ಬು ಬೆಳೆಗಾರರು (sugarcane) ಮಂಗಳವಾರ ಪ್ರತಿಭಟನೆ ನಡೆಯಲಿಲ್ಲ.
ಕಳೆದ ಮೂರು ವರ್ಷಗಳಿಂದ ಶಿಗ್ಗಾಂವಿ ತಾಲೂಕಿನ ಕೋಣನಕೇರಿ ಹತ್ತಿರದ ವಿಐಎನ್​ಪಿ ಸಕ್ಕರೆ ಕಾರ್ಖಾನೆ ಕಬ್ಬು ಖರೀದಿಯಲ್ಲಿ ತಾರತಮ್ಯ ಮಾಡುತ್ತಿದೆ. ಪಕ್ಕದ ಕಲಘಟಗಿ, ಮುಂಡಗೋಡ, ಹುಬ್ಬಳ್ಳಿ, ಹಳಿಯಾಳ ತಾಲೂಕಿನ ರೈತರಿಗೆ ಕಟಾವು ಮತ್ತು ಬಾಡಿಗೆ ಹೊರತುಪಡಿಸಿ ಟನ್​ಗೆ ನೇರವಾಗಿ 3125 ರೂ. ಪಾವತಿಸುತ್ತಿದೆ. ಶಿಗ್ಗಾಂವಿ ತಾಲೂಕಿನ ಕಬ್ಬು ಬೆಳೆಗಾರರಿಗೆ ಬಾಡಿಗೆ ಮತ್ತು ಕಟಾವು ಮುರಿದು ಟನ್​ಗೆ 2575ರೂ. ನೀಡುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ. ಈ ತಾರತಮ್ಯ ಖಂಡಿಸಿ ರಸ್ತೆ, ಕಾರ್ಖಾನೆ ಬಂದ್ ಮಾಡಿ ಪ್ರತಿಭಟನೆಗೆ ಕಬ್ಬು ಬೆಳೆಗಾರರು ಮುಂದಾಗಿದ್ದರು. ಸೋಮವಾರ ಸಂಜೆ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರೊಂದಿಗೆ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಡಿವೈಎಸ್​ಪಿ ಗುರುಶಾಂತಪ್ಪ ಕೆ. ಸಭೆ ನಡೆಸಿದರು. ಸಭೆಯಲ್ಲಿ ರೈತರು ಕಬ್ಬು ದರದಲ್ಲಿನ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದರು. ಉತ್ತರಿಸಿದ ಕಾರ್ಖಾನೆ ಎಂ.ಡಿ. ವಿವೇಕ ಹೆಬ್ಬಾರ, ಧಾರವಾಡ, ಕಲಘಟಗಿ ತಾಲೂಕಿನ ಕಬ್ಬಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಅವರಿಗೆ ಹೆಚ್ಚಿನ ದರ ನೀಡುತ್ತಿದ್ದೇವೆ. ಆದರೆ, ಶಿಗ್ಗಾಂವಿ ತಾಲೂಕಿನ ಕಬ್ಬಿನಲ್ಲಿ ಸಕ್ಕರೆ ಅಂಶ ಕಡಿಮೆ ಇದೆ. ಅದಕ್ಕನುಗುಣವಾಗಿ ದರ ನೀಡುತ್ತಿದ್ದೇವೆ ಎಂದರು. 2800 ರೂಪಾಯಿ ದರವನ್ನಾದರೂ ನೀಡಬೇಕು ಎಂದು ರೈತರು ಹಠ ಹಿಡಿದರು. ನಂತರ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ವಿವೇಕ ಹೆಬ್ಬಾರ ಅವರು ಸಾಗಾಣಿಕೆ ಮತ್ತು ಕಟಾವು ವೆಚ್ಚ ತೆಗೆದು ನೇರವಾಗಿ ರೈತರಿಗೆ ಟನ್​ಗೆ sugarcane payment assured 2711 ರೂಪಾಯಿ ಕೊಡುವುದಾಗಿ ತಿಳಿಸಿದರು. ಇದಕ್ಕೆ ರೈತರು ಸಮ್ಮತಿಸಿ, ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಪಡೆದರು.