ಹಿರೇಕೆರೂರಿನ ಸಿಇಎಸ್ ವಿದ್ಯಾ ಸಂಸ್ಥೆಯ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲದ ವತಿಯಿಂದ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ದಿನಾಚರಣೆ traditional day ಮೆರವಣಿಗೆಗೆ ಎಸ್.ಎಸ್. ಪಾಟೀಲ ಚಾಲನೆ ನೀಡಿದರು.  
ಹಾವೇರಿ

traditional day ಸಾಂಪ್ರದಾಯಿಕ ದಿನಾಚರಣೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ಹಿರೇಕೆರೂರು: ಭಾರತದ ಸಂಸ್ಕೃತಿ ಮತ್ತು ಪರಂಪರೆ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ. ಯುವಜನತೆ ತಮ್ಮ ಸಂಸ್ಕೃತಿಯ ಬೇರುಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಸಬೇಕು ಎಂದು ಸಿಇಎಸ್ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಾಂಪ್ರದಾಯಿಕ ದಿನಾಚರಣೆಯ traditional day ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕ ಜೀವನ ಶೈಲಿಯ ಪ್ರಭಾವದ ನಡುವೆಯೂ ನಮ್ಮ ಸಂಪ್ರದಾಯ, ನೈತಿಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಶಿಕ್ಷಣದ ಜತೆಗೆ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಎಂದರು.
ಸಾಂಪ್ರಾಯಿಕ ಆಚರಣೆಯ ನಿಮಿತ್ತ ಕಾಲೇಜಿನ ಆವರಣವು ಬಣ್ಣ ಬಣ್ಣದ ಅಲಂಕಾರ, ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ವಿದ್ಯಾರ್ಥಿಗಳ ವೈವಿಧ್ಯಮಯ ವೇಷಭೂಷಣಗಳಿಂದ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಪ್ರಸಿದ್ಧ ಹೋರಿಗಳನ್ನು ಜಾಂಜ್ ವಾದ್ಯದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಕರ್ನಾಟಕ, ಪಂಜಾಬ್, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಗಮನ ಸೆಳೆದರು.
ವಿದ್ಯಾರ್ಥಿನಿಯರು ಸೀರೆ, ಲಂಗ-ದಾವಣಿ ಹಾಗೂ ವಿವಿಧ ಜನಾಂಗಗಳ ಉಡುಪುಗಳಲ್ಲಿ ಮಿಂಚಿದರೆ, ವಿದ್ಯಾರ್ಥಿಗಳು ಪಂಚೆ, ಕುರ್ತಾ, ಶೇರ್ವಾನಿ ಹಾಗೂ ವಿವಿಧ ಸಾಂಪ್ರದಾಯಿಕ ವೇಷಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣವನರ, ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಪ್ರಾಧ್ಯಾಪಕ ಪಿ.ಎಂ. ವಿಜಯಕುಮಾರ, ಸಿ.ಆರ್. ದೂದಿಹಳ್ಳಿ, ಕಿರಣ್ ಬಾಗಲರ, ಶಶಿಕುಮಾರ ಕಡೂರ, ಚಂದ್ರೇಗೌಡ ಆರ್., ಸಂಜೀವಕುಮಾರ ಕೆಂಪಳ್ಳೇರ, ನಾಗರಾಜ ಉಪ್ಪಾರ, ಲಯಾ ಬಿ.ವೈ., ಪೂಜಾಅಂಡಗಂಟಿ, ಸರಸ್ವತಿ ಕಂಬಾಳಿಮಠ, ದೀಪಾ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ರಘು ಹಂಚಿನ, ಚೇತನ ವಿ.ಬಿ., ರೋಹನ ಪಾಟೀಲ, ವಿಕಾಸ ಎಂ.ಎಸ್., ನಯನಕುಮಾರ ದೂದೀಹಳ್ಳಿ, ಗಿರೀಶ ಪಿ.ಟಿ., ಕರಿಬಸವ ಎಸ್.ಎಂ. ಇತರರು ಇದ್ದರು.