ಶಿಗ್ಗಾಂವ ತಾಲೂಕಿನ ಕಲ್ಯಾಣ ಗ್ರಾಮದ ಜಿಟಿಟಿಸಿ ಎದುರು (Students protest) ಎಬಿವಿಪಿ ಮತ್ತು ಕನ್ನಡ ಜಾಗೃತ ವೇದಿಕೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ, ಪ್ರಾಚಾರ್ಯು ಭಾರತಿ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು. 
ಹಾವೇರಿ

Students protest ಜಿಟಿಟಿಸಿ ಎದುರು ವಿದ್ಯಾರ್ಥಿಗಳ ಪ್ರತಿಭಟನೆ

ಇತ್ತೀಚೆಗೆ ಬಂದ ಉಪನ್ಯಾಸಕರ ಪಾಠಗಳು ಅರ್ಥವಾಗಲು ಕಷ್ಟವಾಗುತ್ತಿದೆ. ಈ ವಿಷಯ ಪ್ರಾಚಾರ್ಯರ ಗಮನಕ್ಕೆ ತಂದರೂ ಅವರು ವಿದ್ಯಾರ್ಥಿಗಳದೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ. ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಬಗ್ಗೆ ಮೌಖಿಕ, ಮನವಿ ಮೂಲಕ ತಿಳಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಿಡಿಯೋ ಮಾಡಿ, ಪಾಲಕರಿಗೆ ಕಳುಹಿಸುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರದಲ್ಲಾಗುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳನ್ನೇ ಹೊಣೆಯಾಗಿಸಿ ಶಿಕ್ಷೆ ನೀಡುತ್ತಿದ್ದಾರೆ. ಪ್ರಾಚಾರ್ಯರು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸುತ್ತಿಲ್ಲ. ಒಂದು ವಾರದಲ್ಲಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಎಬಿವಿಪಿ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಮೂಲಕ ತಿಳಿಸಿದ್ದಾರೆ.

ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ ದೊಡ್ಡಮನಿ, ಬಸವರಾಜ ಕಲ್ಲಪ್ಪನವರ, ವಿನಾಯಕ ಕುಮ್ಮೂರ, ಕನ್ನಡ ಜಾಗೃತ ವೇದಿಕೆ ಜಿಲ್ಲಾದ್ಯಕ್ಷ ಹರೀಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಲಂಕೇಶ ಛಲವಾದಿ, ಆಕಾಶ ವನಹಳ್ಳಿ, ವಿನಾಯಕ ಆಚಾರ್ಯ, ಗಗನ ಹಡಪದ, ರಕ್ಷಿತ್ ಎಂ., ಗುರುರಾಜ, ವೀರೇಶ ಸೇರಿದಂತೆ ಜಿಟಿಟಿಸಿ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಇದ್ದರು.