ಕ್ರೈಂ 
ಹಾವೇರಿ

ತಂದೆ ಮಾಡಿದ ಸಾಲಕ್ಕೆ ಹೆದರಿ ಮಗ ಆತ್ಮಹತ್ಯೆ

ಕರಿಯಪ್ಪ ಅರಳಿಕಟ್ಟಿ

ಶಿಗ್ಗಾಂವಿ: ಸಾಲಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅರಟಾಳ ಗ್ರಾಮದಲ್ಲಿ ನಡೆದಿದೆ.

ರಾಜು ರುದ್ರಪ್ಪ ಹೊನ್ನಿಹಳ್ಳಿ (33) ಮೃತ ರೈತ.

ಇವರ ತಂದೆ ಕೃಷಿಗಾಗಿ 1 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಕಳೆದ ತಿಂಗಳು ಅವರು ಮೃತಪಟ್ಟಿದ್ದರು. ಇದರಿಂದ ಕುಟುಂಬದ ಜವಾಬ್ದಾರಿ ರಾಜುನ ಮೇಲೆ ಬಿದ್ದಿತ್ತು. ಅಲ್ಲದೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಹಾಳಾಗಿದ್ದವು. ಇದರಿಂದ ಸಾಲ ತೀರಿಸಲಾಗದೆ ಮನನೊಂದು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.