ನಾಗರ ಹಾವೊಂದನ್ನು ಹಿಡಿದಿರುವ ಉರಗ ತ ಅವಿನಾಶ ಬೆಳಗಾಲ. 
ಹಾವೇರಿ

snake-saver-ಉರಗಗಳ ರಕ್ಷಕ ಅವಿನಾಶ!

ಹಾನಗಲ್ಲ: ಹಾವು ಎಂದಾಕ್ಷಣ ಬೆಚ್ಚಿ ಬೀಳುವ ಜನರ ನಡುವೆ ಇಲ್ಲೋಬ್ಬ ಯುವಕ ಜೀವ ಹಂಗು ತೊರೆದು ಜನರ ಹಾಗೂ ಉರಗಳ ಪ್ರಾಣ ರಕ್ಷಣೆಯಲ್ಲಿ ತೊಡಗಿ ಜನರ ಪ್ರೀತಿಗೆ ಪಾತ್ರರಾಗಿದ್ದಾನೆ.
ಹಾನಗಲ್ಲ ತಾಲೂಕಿನ ಗೊಂದಿ ಗ್ರಾಮದ ಅವಿನಾಶ ಬೆಳಗಾಲ ವೃತ್ತಿಯಲ್ಲಿ ೋಟೋಗ್ರಾರ್​ ಹಾಗೂ ಗ್ರಾಮ್​ಒನ್​ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ನಾಡಿಗೆ ಬಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದು ಇವರ ಪ್ರವೃತ್ತಿ. ಹಾವು ಹಿಡಿಯುವುದಕ್ಕಾಗಿ ಯಾರೇ ಕರೆ ಮಾಡಿದರೂ ತಣ ಅಲ್ಲಿಗೆ ಹೋಗಿ ಹಾವು ಹಿಡಿದು ಅವರ ಆತಂಕ ನಿವಾರಿಸುತ್ತಿದ್ದಾರೆ.

300ಕ್ಕೂ ಅಧಿಕ ಹಾವು ಹಿಡಿದಿದ್ದಾರೆ

ಏಳು ವರ್ಷಗಳಿಂದ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದಾರೆ ಅವಿನಾಶ. ತಮ್ಮ ಗೆಳೆಯರೊಬ್ಬರು ಹಾವು ಹಿಡಿಯುವುದನ್ನು ನೋಡುತ್ತಿದ್ದ ಇವರು, ತಾವು ಕೂಡ ಹಾವು ಹಿಡಿಯುವ ಟೆಕ್ನಿಕ್​ ಬಳಸಿ ಸ್ಟಿಕ್​ ಸಹಾಕದಿಂದ ಹಾವು ಹಿಡಿಯುವುದು ಕಲಿತಿದ್ದಾರೆ. ಈವರೆಗೆ ಅವಿನಾಶ್​ 300ಕ್ಕೂ ಅಧಿಕ ಹಾವುಗಳನ್ನು ಹಿಡಿದು ಸುರತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಿರಿ

ಯಾವುದೇ ಹಾವು ಆಕಸ್ಮಿಕವಾಗಿ ಕಚ್ಚಿದರೆ ನಾಟಿ ಔಷಧಗಳ ಮೊರೆ ಹೋಗುವುದರ ಬದಲು, ತಣ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದೇ ಉತ್ತಮ. ಎಲ್ಲದಕ್ಕೂ ಪ್ರಮುಖವಾದ ಸಂಗತಿ ಎಂದರೆ ಅದು ಯಾವ ಜಾತಿಯ ಹಾವು ಎಂಬುದು ತಿಳಿದಿದ್ದರೆ ಔಷಧೋಪಚಾರಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅವಿನಾಶ.
"

ನನ್ನದು ಹಣಕ್ಕಾಗಿ ಹಾವು ಹಿಡಿಯುವ ಉದ್ಯೋಗವಲ್ಲ. ಇದು ಸೇವೆ. ಉರಗ ಸಂತತಿ ಉಳಿಸಬೇಕು. ಅದೊಂದು ಆಹಾರ ಸರಪಳಿಯ ಭಾಗವಾಗಿದೆ. ಮನೆ ಸೇರಿದಂತೆ ಇತರ ಕಡೆ ಹಾವು ಕಂಡರೆ ನನಗೆ ಕರೆಮಾಡಿ, ನಾನು ಬಂದು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತೇನೆ.