ಸವಣೂರ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶೇಷಾಚಲ ದಿಂಡಿ ಉತ್ಸವದ ಸತ್ಸಂಗದಲ್ಲಿ ಅಗಡಿ ಆನಂದವನದ ಶ್ರೀ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಸಂದೇಶ ನೀಡಿದರು.
ಸವಣೂರ: ನಿರಂತರವಾಗಿ ಭಗವಂತನ ನಾಮಸ್ಮರಣೆಯ (Lord remembrance) ಮೂಲಕ ನಮ್ಮ ಎಲ್ಲ ಪಾಪ ಕಳೆದುಕೊಳ್ಳಬಹುದು ಎಂದು ಅಗಡಿ ಆನಂದವನದ ಶ್ರೀ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶೇಷಾಚಲ ದಿಂಡಿ ಉತ್ಸವದ ಸತ್ಸಂಗದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶ್ರೀ ಚಿದಂಬರ ಸ್ವಾಮೀಜಿ ಅವರಿಗೆ ವೆಂಕಟರಮಣ ದೇವರ ಅನುಗ್ರಹ ಹಾಗೂ ಕುಂದಗೋಳ ೇತ್ರದ ಮಹತ್ವವನ್ನು ತಿಳಿಸಿದರು.
ಕನವಳ್ಳಿಯಿಂದ ಮುರಗೋಡ ೇತ್ರಕ್ಕೆ 46ನೇ ವಾಷಿರ್ಕ ಪಾದಯಾತ್ರಾ ದಿಂಡಿ ಉತ್ಸವ ಕೈಗೊಂಡ ಭಕ್ತವೃಂದ ದೇವಸ್ಥಾನದಲ್ಲಿ ಸತ್ಸಂಗ ನಡೆಸಿದರು. ಹರಿನಾಮ ಸಂಕೀರ್ತನೆ, ನೃತ್ಯ, ವಾದ್ಯ ವಾದನ ಸಮೇತ ದೇವರ ಸೇವೆ ಕೈಗೊಂಡರು.
ದಿಂಡಿ ಪ್ರಮುಖರಾದ ಶ್ರೀನಿವಾಸ ಶಿವಪೂಜಿ, ರಾಮಕಷ್ಣ ಹರಿಹರ, ಗೋವಿಂದ, ವೆಂಕಟೇಶ ಕುಲಕಣಿರ್, ಸತೀಶ ಪಾಟೀಲ, ರವಿ ಪಾಟೀಲ, ಮಂಜುನಾಥ ಸಾರಥರಾಮ, ಚಿದಂಬರ ಸಾರಥರಾಮ, ಎಂ.ಜಿ. ಕುಲಕಣಿರ್, ವಿಶಾಲ ಸಾರಥರಾಮ, ನಾಗೇಶ ಪಾಟೀಲ, ಶ್ರೀನಿವಾಸ ಖಾರದ, ಕೇಶವ ಪಡಸಲಗಿ, ಈಶಣ್ಣ ಸಾಹುಕಾರ ಇತರರಿದ್ದರು. ಅರ್ಚಕರಾದ ಪ್ರಕಾಶ ಜೋಗಳೇಕರ ಕಾರ್ಯಕ್ರಮ ನಿರ್ವಹಿಸಿ, ಅನ್ನ ಸಂತರ್ಪಣೆ ಕೈಗೊಂಡರು.