ಗೋಹತ್ಯೆ ನಿಲ್ಲಿಸಲು ಒತ್ತಾಯಿಸಿ ಸವಣೂರಲ್ಲಿ ಹಿಂದೂಪರ ಸಂಟನೆಗಳ ಪ್ರಮುಖರು ಕೈಗೊಂಡ ಮೌನ ಪ್ರತಿಭಟನೆ ಸ್ಥಳಕ್ಕೆ ಎಎಸ್ಪಿ ಲಕ್ಷ$್ಮ್ಮಣ ಶಿರಕೋಳ ಆಗಮಿಸಿ ಚಚಿರ್ಸಿದರು. ಜಯತೀರ್ಥ ದೇಶಪಾಂಡೆ, ಶಿವಪುತ್ರಪ್ಪ ಕಲಕೋಟಿ, ಮಹೇಶ ಸಾಲಿಮಠ, ಮಹೇಶ ಮುದಗಲ್​ ಇತರರು ಇದ್ದರು. 
ಹಾವೇರಿ

Protest ಗೋಹತ್ಯೆ ತಡೆಯಲು ಮೌನ ಪ್ರತಿಭಟನೆ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ವಿರುದ್ಧ ಹರಿಹಾಯ್ದ ಹಿಂದೂಪರ ಸಂಟನೆ ಕಾರ್ಯಕರ್ತರು
ಸವಣೂರು: ಗೋಹತ್ಯೆ ತಡೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರಂತರ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯ ಗೋಹತ್ಯೆ ಮುಂದುವರಿದಿದೆ ಎಂದು ಆರೋಪಿಸಿ ಹಿಂದೂಪರ ಸಂಟನೆಗಳ ಪ್ರಮುಖರು ಮಂಗಳವಾರ ಪಟ್ಟಣದ ಪೊಲೀಸ್​ ಠಾಣೆ ಎದುರಲ್ಲಿ ಮೌನ ಪ್ರತಿಭಟನೆ ಕೈಗೊಂಡರು.
ಸ್ಥಳಕ್ಕೆ ಡಿವೈಎಸ್ಪಿ ಗುರುಶಾಂತಪ್ಪ ಕೆ.ವಿ. ಆಗಮಿಸಿ ಪ್ರತಿಭಟನಾಕಾರರೊಂದಿಗೆ ಚಚಿರ್ಸಲು ಮುಂದಾದರು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯ ಗಂಗಾಧರ ಬಾಣದ ಮಾತನಾಡಿ, ಕಾನೂನು ಬಾಹಿರವಾಗಿ ಸವಣೂರಿನ ವಿವಿಧ ಸ್ಥಳಗಳಲ್ಲಿ ಗೋಹತ್ಯೆ ನಡೆಯುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ವತಿರ್ಸುತ್ತಿದ್ದಾರೆ. ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸ್ಥಳಕ್ಕೆ ಎಸ್ಪಿ ಅವರು ಆಗಮಿಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಹಲವು ದಿನಗಳ ಮೊದಲೇ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಆದರೂ ಎಸ್ಪಿ ಬರಲು ಹಿಂದೇಟು ಹಾಕುತ್ತಿರುವುದು ಅನುಮಾನಕ್ಕೆಡೆ ಮಾಡಿದೆ. ಎಸ್ಪಿ ಅವರು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಹಿಂಪಡೆಯುವ ಮಾತೇ ಇಲ್ಲ ಎಂದರು.
ಪೊಲೀಸ್​ ಅಧಿಕಾರಿಗಳು ಅನಿವಾರ್ಯವಾಗಿ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದರು. ನಂತರ, ಸ್ಥಳಕ್ಕೆ ತಡವಾಗಿ ಆಗಮಿಸಿದ ಎಎಸ್ಪಿ ಲಕ್ಷ$್ಮ್ಮಣ ಶಿರಕೋಳ ಅವರೊಂದಿಗೆ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದರು. ನಂತರ, ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಎಎಸ್​ಪಿ, ಗೋಹತ್ಯೆ ತಡೆಯಲು ವಿಶೇಷ ತಂಡ ರಚಿಸಲಾಗುವುದು. ಈಗಾಗಲೇ ಚೇಕ್​ಪೋಸ್ಟ್​ಗಳನ್ನು ಹಾಕಲಾಗಿದೆ. ಹಿಂದೂಪರ ಸಂಟನೆಗಳ ಪದಾಧಿಕಾರಿಗಳ ಮಾಹಿತಿಯನ್ನು ಪಡೆದು ಗೋ ಸಾಗಾಟವನ್ನು ತಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪುರಸಭೆ ಅಧಿಕಾರಿಗಳಿಗೆ ಸೂಚಿಸಿ ಪಟ್ಟಣದಲ್ಲಿನ ಕಸಾಯಿಖಾನೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು. ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದರು.
ಮುಂದಿನ ಎರಡು ದಿನಗಳಲ್ಲಿ ಮತ್ತೆ ಗೋ ಸಾಗಾಟ ಹಾಗೂ ಗೋ ಹತ್ಯೆ ಪ್ರಕರಣ ಕಂಡು ಬಂದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.
ಪಿಐ ತಿಮ್ಮಣ್ಣ ಚಾಮನೂರ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್​ ಅಧಿಕಾರಿಗಳು ಹಾಗೂ ಪ್ರಮುಖರಾದ ಜಯತೀರ್ಥ ದೇಶಪಾಂಡೆ, ಶಿವಪುತ್ರಪ್ಪ ಕಲಕೋಟಿ, ಮಹೇಶ ಸಾಲಿಮಠ, ಮಹೇಶ ಮುದಗಲ್​, ಹನುಮಂತಗೌಡ ಮುದಿಗೌಡ್ರ, ಧರಿಯಪ್ಪಗೌಡ ಪಾಟೀಲ, ಪ್ರವಿಣ ಚರಂತಿಮಠ, ಶ್ರೀನಿವಾಸ ಗಿತ್ತೆ, ಸಂತೋಷ ಗುಡಿಸಾಗರ, ಪ್ರವಿಣ ಬಾಲೇಹೊಸೂರು, ಬಸನಗೌಡ ಕೊಪ್ಪದ, ಸಮೀತ ಕೆಮ್ಮಣಕೇರಿ, ಮಹೇಶ ಜಡಿ, ಪರಶುರಾಮ ಈಳಗೇರ, ಶಂಕರ ಪಾಟೀಲ ಇತರರಿದ್ದರು.