Crime 
ಹಾವೇರಿ

ಕುರಿಗಳನ್ನು ಒಟ್ಟು ಮಾಡಲು ಹೋಗಿ ಕುರಿಗಾಹಿ ಸಾವು

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ಕುರಿಗಳು ಒಟ್ಟು ಮಾಡಲು ಓಡಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಕುರಿಗಾಹಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಯತ್ತಿಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಲೋಹಿತ ಪರಶುರಾಮ (22) ಮೃತ ಕುರಿಗಾಹಿ.

ಈತ ಜಮೀನಿನಲ್ಲಿ ಕುರಿ ಕಾಯುತ್ತಿದ್ದ ಸಮಯದಲ್ಲಿ ಹೆಚ್ಚಿನ ಗಾಳಿ ಬಂದಿದೆ. ಇದರಿಂದ ಕುರಿಗಳು ಅತ್ತ ಇತ್ತ ಓಡಾಡಲು ಪ್ರಾರಂಭಿಸಿದಾಗ ಅವುಗಳನ್ನು ಒಟ್ಟು ಮಾಡಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.