ಸವಣೂರ ಪಟ್ಟಣದ ಐಬಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯ ಶಿವಪುತ್ರಪ್ಪ ಕಲಕೋಟಿ ಮಾತನಾಡಿದರು. discussion  
ಹಾವೇರಿ

discussion ಸವಣೂರ, ಶಿಗ್ಗಾಂವಿ ಅಭಿವೃದ್ಧಿ ಚರ್ಚೆಗೆ ಸಮಯ ನಿಗದಿಪಡಿಸಲಿ

ವಿವೇಕಾನಂದ ದಾಸನಕೊಪ್ಪ
ಸವಣೂರ: ಸವಣೂರ,ಶಿಗ್ಗಾಂವಿ ಅಭಿವೃದ್ಧಿ ವಿಷಯಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಅವರು ಬಹಿರಂಗ ಚರ್ಚೆಗೆ (discussion) ಬರಲಿ ಎಂದು ಶಾಸಕ ಯಾಸೀರಖಾನ್​ ಪಠಾಣ ಹಾಕಿದ್ದ ಸವಾಲಿಗೆ ಪ್ರತಿಯಾಗಿ ಬಿಜೆಪಿ ಪದಾಧಿಕಾರಿಗಳು, ಬೊಮ್ಮಾಯಿ ಅವರ ಬದಲಿಗೆ ನಾವು ಬರುತ್ತೇವೆ ಎಂದು ಶಾಸಕ ಪಠಾಣ ಅವರಿಗೆ ಧಮ್​, ತಾಕತ್​ ಇದ್ದರೆ ದಿನಾಂಕ, ಸಮಯ ನಿಗದಿಪಡಿಸಲಿ ಎಂದು ಹರಿಹಾಯ್ದಿದ್ದಾರೆ.
ಪಟ್ಟಣದ ಐಬಿಯಲ್ಲಿ ಸೋಮವಾರ ಬಿಜೆಪಿ ಸವಣೂರ ಮಂಡಲ ಅಧ್ಯ ಶಿವಪುತ್ರಪ್ಪ ಕಲಕೋಟಿ ನೇತೃತ್ವದಲ್ಲಿ ಪದಾಧಿ-ಕಾರಿಗಳು ಸುದ್ದಿಗೋಷ್ಠಿ ನಡೆಸಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮಾಡದಿರುವಷ್ಟು ಅಭಿವೃದ್ಧಿ ಕೆಲಸಗಳನ್ನು ಶಾಸಕನಾಗಿ ಮಾಡಿದ್ದೇನೆ. ಬೊಮ್ಮಾಯಿ ಅವರು ಅವರ ಅವಧಿಯಲ್ಲಿನ ಕಾರ್ಯಗಳನ್ನು ಹೇಳಲಿ, ನಾನು ನನ್ನ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದಿದ್ದಾರೆ. ಈ ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದರು.
ಶಾಸಕರು ಪ್ರತಿಷ್ಠಾನ ಮತ್ತು ಪ್ರಾಧಿಕಾರದ ನಡುವಿನ ವ್ಯತ್ಯಾಸ ಅರಿಯದೆ ನಿತ್ಯವು ಪ್ರಾಧಿಕಾರದ ಕನವರಿಕೆಯಲ್ಲಿದ್ದಾರೆ. ನಂಜುಂಡಪ್ಪ ವರದಿಯ ಪ್ರಕಾರ 2008ರ ಪೂರ್ವದಲ್ಲಿ ಶಿಗ್ಗಾಂವಿ&ಸವಣೂರ ೇತ್ರ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. 2008ರಲ್ಲಿ ಬಸವರಾಜ ಬೊಮ್ಮಾಯಿ ಅವರು ಶಾಸಕರಾದ ನಂತರ ಸಾವಿರಾರು ಕೋಟಿ ಅನುದಾನ ತರುವ ಮೂಲಕ ೇತ್ರದಲ್ಲಿನ ರಸ್ತೆ, ಮಂದಿರ, ಮಜೀದ್​, ಆಸ್ಪತ್ರೆ, ಶಾಲಾ-ಕಾಲೇಜ್​ ಅಭಿವೃದ್ಧಿಪಡಿಸಿದ್ದಾರೆ. ನೆರೆಹಾವಳಿಯಲ್ಲಿ ಸೂರು ಕಳೆದುಕೊಂಡವರಿಗೆ ಸೂರು, ಕುಡಿಯುವ ನೀರು, ಬೀದಿದೀಪ, ಶಿಗ್ಗಾಂವ, ಸವಣೂರ, ಬಂಕಾಪುರ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು, ರೈತರ ಅನುಕೂಲಕ್ಕಾಗಿ ಏತ ನೀರಾವರಿ ಯೋಜನೆ ಕಲ್ಪಿಸಿದ ಕೀತಿರ್ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದರು.
ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕೆಲಸದ ಬಗ್ಗೆ ಹಗುರವಾಗಿ ಮಾತನಾಡಿ ಸವಾಲು ಹಾಕಿರುವುದನ್ನು ಬಿಜೆಪಿ ಕಾರ್ಯಕರ್ತರು ಸ್ವೀಕರಿಸುತ್ತೇವೆ. ಬಹಿರಂಗ ಚರ್ಚೆಗೆ ಸಮಯ ನಿಗದಿಪಡಿಸಿ. ಬಹಿರಂಗ ಚರ್ಚೆಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಪದಾಧಿಕಾರಿಗಳು ಬಂದು ಉತ್ತರ ನೀಡಲು ಸಿದ್ಧರಿದ್ದೇವೆ ಎಂದು ಶಾಸಕ ಪಠಾಣ ಅವರಿಗೆ ಸವಾಲು ಹಾಕಿದರು.  ಬಿಜೆಪಿ ಪ್ರಮುಖರಾದ ನಿಂಗಪ್ಪ ಡವಗಿ, ಬಸನಗೌಡ ಕೊಪ್ಪದ, ಅಶೋಕ ಯಲಿಗಾರ, ಧರಿಯಪ್ಪಗೌಡ ಪಾಟೀಲ, ಚನ್ನಬಸಯ್ಯ ಪ್ರಭಯ್ಯನವರಮಠ, ಹನುಮಂತಪ್ಪ ದೊಡ್ಡಮನಿ, ಕಾಂತೇಶ ವಾಲ್ಮೀಕಿ, ನಾಗಪ್ಪ ವಾಲ್ಮೀಕಿ, ಮಲ್ಲಿಕಾರ್ಜುನ ಹೊಸಮನಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.