ಶಾಲೆಗಳ ಬೀಗ ಮುರಿದು ಸಿಲಿಂಡರ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಕಾಪುರ ಪೊಲೀಸರು ಬಂಧಿಸಿ ನಾಲ್ಕು ಸಿಲಿಂಡರ್ ಹಾಗೂ ಬೈಕ್ ವಶಕ್ಕೆ ಪಡೆದಿದ್ದಾರೆ. ಪಿಎಸ್‌ಐ ಮಂಜುನಾಥ ಕುರಿ, ವೆಂಕಟೇಶ ಲಮಾಣಿ, ಕೆ.ರಜನಿ ಇದ್ದರು.
ಬಂಕಾಪುರ: ಸರ್ಕಾರಿ ಶಾಲೆಗಳ ಬೀಗ ಮುರಿದು ಸಿಲಿಂಡರ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿ ನಾಲ್ಕು ಸಿಲಿಂಡರ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.
ಹಾನಗಲ್ಲ ತಾಲೂಕಿನ ಯಳ್ಳೂರ ಗ್ರಾಮದ ಶಿದ್ದಲಿಂಗಯ್ಯ ರಾಮಯ್ಯನವರ ಮತ್ತು ಬಮ್ಮನಹಳ್ಳಿ ಮಾರಿಕಾಂಬಾ ಪ್ಲಾಟ್‌ನ ಫಕೀರಗೌಡ ಶಿವನಗೌಡ ಪಾಟೀಲ ಬಂಧಿತ ಅರೋಪಿಗಳು.
ಏ.5ರಂದು ಶಿಗ್ಗಾಂವಿ ತಾಲೂಕಿನ ಅಂದಲಗಿ, ಹೋತನಹಳ್ಳಿ, ಹುಲಿಕಟ್ಟಿ ಮತ್ತು ಕೋಣನಕೇರಿ ಗ್ರಾಮಗಳ ಸರ್ಕಾರಿ ಶಾಲೆಗಳ ಬೀಗ ಮುರಿದು ಸಿಲಿಂಡರ್ ಕಳವು ಮಾಡಿದ ಬಗ್ಗೆ ಬಂಕಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜುನಾಥ ಕುರಿ, ವೆಂಕಟೇಶ ಲಮಾಣಿ, ಗೊವೀಂದ ಲಮಾಣಿ, ಬೀರಪ್ಪ ಕಳ್ಳಿಮನಿ, ಕೆ.ರಜನಿ, ಕೂಟೇಶ ಬಿ.ಎಂ, ಎ.ಬಿ.ವಿಜಾಪುರ, ಗಂಗಾಧರ ಹರಿಜನ, ಮಾಲತೇಶ ಜಾವೋಜಿ, ನಿಂಗಪ್ಪ ಪೂಜಾರ, ಎಸ್.ಎ.ಸಗ್ಗಮ್ಮನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.