ಸವಣೂರು ಪಟ್ಟಣದ ಕೋರಿಪೇಟೆಯಲ್ಲಿರುವ ಶಿರಹಟ್ಟಿ ಶ್ರೀ ಜಗದ್ಗುರು ಕೀರೇಶ್ವರ ಶಾಖಾಮಠದ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಶ್ರೀ ಜಗದ್ಗುರು ಕೀರ ದಿಂಗಾಲೇಶ್ವರ ಸ್ವಾಮೀಜಿ ಪುರ ಪ್ರವೇಶ ಅದ್ದೂರಿಯಾಗಿ ಜರುಗಿತು. 
ಹಾವೇರಿ

ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪುರ ಪ್ರವೇಶ dingaleshwar shree

ಪ್ರಮುಖ ಮುಖ್ಯಾಂಶಗಳು

  • ಸವಣೂರ ಶ್ರೀ ಫಕೀರೇಶ್ವರ ಶಾಖಾಮಠದ ಜಾತ್ರಾ ಮಹೋತ್ಸವ ಇಂದಿನಿಂದ
ಸವಣೂರ: ಪಟ್ಟಣದ ಕೋರಿಪೇಟೆಯಲ್ಲಿರುವ ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಶಾಖಾಮಠದ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಸಂಜೆ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪುರ ಪ್ರವೇಶ ವಿವಿಧ ವಾದ್ಯವೈಭವಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಶಿರಹಟ್ಟಿ ಶ್ರೀ ಜಗದ್ಗುರು ಕೀರೇಶ್ವರ ಶಾಖಾಮಠಕ್ಕೆ ಆಗಮಿತು. 
ಮೇ 11 ಹಾಗೂ ಮೇ 12ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಮೇ 11ರಂದು ಪ್ರಾಥಃಕಾಲ ಶ್ರೀ ಜಗದ್ಗುರು ಫಕೀರೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವ ಅರ್ಚನೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ಜರುಗಲಿದೆ. 
ನಂತರ ಮಹಿಳಾ ಡೊಳ್ಳು ಮೇಳ ತಂಡ, ಕುದುರೆ ಕುಣಿತ, ಆನೆ ಅಂಬಾರಿ ಪಲ್ಲಕ್ಕಿ, ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀ ಮಠದಿಂದ ಆರಂಭಗೊಳ್ಳುವ ಮೆರವಣಿಗೆ ಕೋರಿಪೇಟೆ, ಬುಧವಾರ ಪೇಟೆ, ಶಿಂಪಿಗಲ್ಲಿ, ಉಪ್ಪಾರ ಓಣಿ, ಶುಕ್ರವಾರ ಪೇಟೆ, ಚಿತ್ರಗಾರ ಓಣಿ, ಮುಖ್ಯ ಮಾರುಕಟ್ಟೆ ಸೇರಿದಂತೆ ರಾಜಬೀದಿಯಲ್ಲಿ ಹಾಯ್ದು ಶ್ರೀಮಠದಲ್ಲಿ ಸಂಪನ್ನಗೊಳ್ಳುವುದು. 
ಸಂಜೆ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ದೂರಿ ರಥೋತ್ಸವ ಜರುಗುವದು. ನಂತರ ಶ್ರೀಮಠದ ಸಭಾಭವನದಲ್ಲಿ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 
ಮೇ 12ರಂದು ಪ್ರಾಥಃಕಾಲ ವಿವಿಧ ಪೂಜಾ ಕೈಂಕರ್ಯ ಜರುಗಲಿವೆ. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಶ್ರೀಗಳಿಂದ ಕಡುಬಿನ ಕಾಳಗ ಉತ್ಸವ ನಡೆಯಲಿದೆ.