ರಟ್ಟಿಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಯು.ಬಿ. ಬಣಕಾರ ಸಭೆ ನಡೆಸಿದರು.  
ಹಾವೇರಿ

ಸರ್ವಜ್ಞನ ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಶೀಘ್ರ Lake filling project

ರಟ್ಟಿಹಳ್ಳಿ: ನೀರಾವರಿ ನಿಗಮದ ವತಿಯಿಂದ ಪ್ರಾರಂಭಗೊಂಡಿದ್ದ ಸರ್ವಜ್ಞನ ಕೆರೆ ತುಂಬಿಸುವ ಯೋಜನೆ (Lake filling project) ಕಾಮಗಾರಿ ಪ್ರಾಯೋಗಿಕ ಹಂತಕ್ಕೆ ತಲುಪಿದೆ. ಯೋಜನೆ ವ್ಯಾಪ್ತಿಯ ಗ್ರಾಮಗಳ ಕೆರೆಗಳಿಗೆ ಪ್ರಾಯೋಗಿಕ ನೀರು ಪೂರೈಕೆ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಯೋಜನೆ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ರಟ್ಟಿಹಳ್ಳಿ ಪಟ್ಟಣದ ಸುಸ್ಸಜ್ಜಿತ ಕ್ರೀಡಾಂಗಣದ ಅಗತ್ಯವಾಗಿದೆ. ಈ ಬಗ್ಗೆ ಕ್ರೀಡಾ ಇಲಾಖೆ ಮತ್ತು ಸಚಿವರಿಗೆ ಅನುದಾನ ಮಂಜೂರು ಮಾಡುವಂತೆ ಪ್ರಸ್ತಾಪ ಮಾಡಲಾಗಿದೆ. ಈ ಬಗ್ಗೆ ‘ವಿಜಯವಾಣಿ’ ಪ್ರಕಟಿಸಿದ ವಿಸõತ ವರದಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.