ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗಳ ಮಟ್ಟದ ಅಹವಾಲುಗಳ ಪರಿಹಾರದತ್ತ -ಗ್ಯಾರಂಟಿ ಚಿತ್ತ Guarantee schemeಶಿಬಿರವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು.
ರಟ್ಟಿಹಳ್ಳಿ: ಕಳೆದ ಎರಡೂವರೆ ವರ್ಷದಲ್ಲಿ ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿಗೆ ಗ್ಯಾರಂಟಿ ಯೋಜನೆಗಳಿಂದ Guarantee scheme ಫಲಾನುಭವಿಗಳಿಗೆ 460 ಕೋಟಿ ರೂ. ತಲುಪಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಮಾಸೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾಸೂರು, ಇಂಗಳಗೊಂದಿ, ಕೋಡಮಗ್ಗಿ, ಹಿರೇಮೊರಬ ಗ್ರಾಮ ಪಂಚಾಯಿತಿ ಮಟ್ಟದ ಅಹವಾಲುಗಳ ಪರಿಹಾರದತ್ತ-ಗ್ಯಾರಂಟಿ ಚಿತ್ತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಯೋಜನೆ ಘೋಷಿಸುವುದು ಸುಲಭ. ಆದರೆ, ಅದನ್ನು ಜನರಿಗೆ ಮುಟ್ಟಿಸುವುದು ಮುಖ್ಯವಾಗಿರುತ್ತದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರ ಮಾತ್ರ. ರಾಜ್ಯದ ಜನರ ಆಶೀರ್ವಾದ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಜನಸಾಮಾನ್ಯರಿಗೆ ಅನುಕೂಲಕರವಾದ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಐದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯ ನಾರಾಯಣಪ್ಪ ಗೌರಕ್ಕನವರ ಮಾತನಾಡಿ, 5 ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಆಥಿರ್ಕ ಭದ್ರತೆಗೆ ಸಹಕಾರಿಯಾಗಿವೆ. ತಾಲೂಕುವಾರು ಗ್ಯಾರಂಟಿ ಸಮಿತಿಗಳ ಮೂಲಕ ನಿರಂತರವಾಗಿ ಸಭೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿ, ಯೋಜನೆಗಳ ಸಮರ್ಪಕವಾದ ಅನುಷ್ಠಾನಕ್ಕೆ ಸಮಿತಿ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯ ಎಂ.ಎಂ. ಹಿರೇಮಠ, ಸಮಿತಿ ಉಪಾಧ್ಯ ರಮೇಶ ಮಡಿವಳರ, ಹಿರೇಕೆರೂರು ತಾಲೂಕು ಗ್ಯಾರಂಟಿ ಯೋಜನಾ ಅಧ್ಯ ಮಲ್ಲಿಕಾರ್ಜುನ ಬುರಡಿಕಟ್ಟಿ, ಗ್ರಾಪಂ ಅಧ್ಯೆ ಪ್ರೇಮಿಳಾ ನಡುವಿನಮನಿ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಗ್ರಾಪಂ ಅಧ್ಯರಾದ ಅಶೋಕ ಪಾಟೀಲ, ಲೀಲಾವತಿ ಕಬ್ಬಾರ, ಜ್ಯೋತಿ ಹಲಗೇರಿ, ತಾಪಂ ಮಾಜಿ ಅಧ್ಯ ಮಹೇಶ ಗುಬ್ಬಿ, ಪಪಂ ಸದಸ್ಯರಾದ ಪಿ.ಡಿ. ಬಸನಗೌಡ್ರು, ವೀರನಗೌಡ ಪ್ಯಾಟಿಗೌಡ್ರು ಗ್ಯಾರಂಟಿ ಸಮಿತಿ ಸದಸ್ಯರು, ಗ್ರಾಪಂ ಸದಸ್ಯರು, ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.