ಹಿರೇಕೆರೂರಿನಿಂದ ಹಾದ್ರಿಹಳ್ಳಿ ಮಾರ್ಗವಾಗಿ ಯತ್ತಿನಹಳ್ಳಿ ಎಂ.ಕೆ., ಗ್ರಾಮ ತಲುಪುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಎಲ್ಲೆಂದರಲ್ಲಿ ಕಂದಕಗಳು ನಿರ್ಮಾಣಗೊಂಡು ಹಾಳಾಗಿರುವುದು. 
ಹಾವೇರಿ

ಸವಾರರ ನಿದ್ದೆಗೆಡಿಸಿದ ರಸ್ತೆ! :road problem

ಮಂಜುನಾಥ ಗದಗಿನ

ವಿಜಯವಾಣಿ ವಿಶೇಷ ಹಿರೇಕೆರೂರು

ಪಟ್ಟಣದಿಂದ ಹಾದ್ರಿಹಳ್ಳಿ ಮಾರ್ಗವಾಗಿ ಯತ್ತಿನಹಳ್ಳಿ ಎಂ.ಕೆ., ಗ್ರಾಮ ತಲುಪುವ ಲೋಕೋಪಯೋಗಿ ಇಲಾಖೆಗೆ ಸೇರಿದ 5 ಕಿ.ಮೀ ರಸ್ತೆ ಹಾಳಾಗಿದ್ದು, ಇದರಿಂದ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಬಾಳಂಬೀಡ ಕ್ರಾಸ್‌ನಿಂದ ಹಾದ್ರಿಹಳ್ಳಿ ಮೂಲಕ ಯತ್ತಿನಹಳ್ಳಿ ಎಂ.ಕೆ., ಗ್ರಾಮದ ತಲುಪುವ ರಸ್ತೆ ಮಾರ್ಗದಲ್ಲಿ ದೊಡ್ಡ ಕಂದಗಳು ನಿರ್ಮಾಣಗೊಂಡಿವೆ. ನಿತ್ಯ ಈ ಮಾರ್ಗದಲ್ಲಿ ಅಧಿಕ ವಾಹನಗಳು ಸಂಚರಿಸುತ್ತಿವೆ. ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಆದರೆ, ರಸ್ತೆ ಹಾಳಾಗಿದ್ದರಿಂದ ಭಯದಲ್ಲೇ ತಗ್ಗು-ಗುಂಡಿಗಳ ಮಧ್ಯೆಯೇ ಸಾಗುವಂತಾಗಿದೆ.
ರಸ್ತೆಯ ಅಕ್ಕಪಕ್ಕದಲ್ಲಿ ತಿಪ್ಪೆಗಳು ನಿರ್ಮಾಣಗೊಂಡಿವೆ. ಇದು ರಸ್ತೆಯ ಮೇಲೆ ಹರಡುತ್ತಿರುವುದರಿಂದ ಸಂಚರಿಸುವ ವಾಹನಗಳು ಮತ್ತು ಬೈಕ್ ಸವಾರರು ಎದುರಿಗೆ ಬರುವ ವಾಹನಗಳಿಗೆ ದಾರಿ ಬಿಡಲು ಹರಸಾಹಸ ಪಡುವಂತಾಗಿದೆ. ಈ ರಸ್ತೆಯನ್ನು ಹಲವು ಬಾರಿ ದುರಸ್ತಿಗೊಳಿಸಿದರೂ ಪ್ರತಿವರ್ಷ ಹಾಳಾಗುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
"

ಈ ರಸ್ತೆ ಪ್ರತಿವರ್ಷ ಹೀಗೆ ಹಾಳಾಗುತ್ತಿದೆ.ನಮ್ಮ ಗ್ರಾಮದ ಗೊಡಚಿಕೊಂಡ ಕ್ರಾಸ್‌ನಿಂದ ಹಿರೇಕೆರೂರು ತಲುಪುವ ರಸ್ತೆಯಲ್ಲಿ ಭಾರಿ ಕಂದಕಗಳು ನಿರ್ಮಾಣಗೊಂಡಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು.

— ಜಯಕುಮಾರ ಹುಲ್ಲಿನಕೊಪ್ಪ. ಯತ್ತಿನಹಳ್ಳಿ ಎಂ.ಕೆ., ಗ್ರಾಮದ ನಿವಾಸಿ

"

ಕೂಡಲೇ ಸ್ಥಳಕ್ಕೆ ಸಹಾಯಕ ಇಂಜಿನಿಯರ್ ಅಧಿಕಾರಿಗಳನ್ನು ಕಳುಹಿಸಿ, ಪರೀಶೀಲನೆ ನಡೆಸಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು.

— ಬಸವರಾಜ ಡಿ.ಬಿ., ಪಿಡಬ್ಲುೃಬ್ಲೂಡಿ ಎ.ಬ್ಲುೃ.ಇ. ಹಿರೇಕೆರೂರು.