ಬ್ಯಾಡಗಿ ತಾಲೂಕು ಇಂಗಳಗುಂದಿ ಪ್ಲಾಟ್‌ನ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿರುವುದು.
ಬ್ಯಾಡಗಿ: ತಾಲೂಕಿನ ಇಂಗಳಗುಂದಿ ಕಾಗಿನೆಲೆ ಪ್ಲಾಟ್‌ಗೆ ಕೂಡುವ ರಸ್ತೆ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಮೇಲಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ 3 ತಿಂಗಳ ಹಿಂದೆ ತಾಲೂಕಿನ ಇಂಗಳಗುಂದಿ ಗ್ರಾಮದ ರಸ್ತೆಗೆ ಭೂಮಿಪೂಜೆ ನಡೆದು ಕಾಮಗಾರಿಗೆ ಶಾಸಕರಿಂದ ಚಾಲನೆ ನೀಡಲಾಗಿತ್ತು. 1 ಕಿಮೀ ವ್ಯಾಪ್ತಿಗೆ ಮರು ಡಾಂಬರೀಕರಣ ಮಾಡಲು 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಅನುದಾನ ಮಂಜೂರಾಗಿ ನಡೆದ ಕಾಮಗಾರಿ ಕಳಪೆಯಾದೆ. ಇದು ಸಾರ್ವಜನಿಕರ ಆಕ್ರೋಕ್ಕೆ ಕಾರಣವಾಗಿದೆ.
ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲು!: ರಾಜ್ಯ ಹಸಿರು ಸೇನೆ ಹಾಗೂ ರೈತಸಂಘದ ಜಿಲ್ಲಾಧ್ಯಕ್ಷ ಎಂ.ಎನ್.ನಾಯಕ ಮಾತನಾಡಿ, ತಾಲೂಕಿನ ಇಂಗಳಗುಂದಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಇಂತಹ ಕಳಪೆ ಕಾಮಗಾರಿಗಳು ನಡೆದಿವೆ. ಈ ಕುರಿತು ಜಿಪಂ ಪಿಆರ್‌ಇಡಿ ವಿಭಾಗದ ಇಂಜಿನಿಯರ್‌ಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದೇವೆ. ಅಲ್ಲದೆ ಜಿಲ್ಲಾಧಿಕಾರಿಗಳ ಹಾಗೂ ಜಿಪಂ ಸಿಇಒ ಕೂಡ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾದಂತೆ ಮೇಲ್ನೋಟಕ್ಕೆ ಕಂಡುಬಂದಿದ್ದು, ತಪ್ಪಿತಸ್ಥರು ಯಾರೆಂದು ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಇಂಗಳಗುಂದಿ ಪ್ಲಾಟ್ ರಸ್ತೆ ಕಾಮಗಾರಿ ಕಳಪೆಯಾಗಿರುವ ಕುರಿತು ಮಾಹಿತಿ ತಿಳಿದುಬಂದಿದ್ದು, ಈ ಕುರಿತು ಕೂಡಲೇ ಸ್ಥಳಕ್ಕೆ ತೆರಳಿ ವರದಿ ಸಲ್ಲಿಸುವಂತೆ ಬ್ಯಾಡಗಿ ಎಇಇ ರಾಮಪ್ಪ ದೊಡ್ಡಮನಿ ಸೂಚಿಸಿರುವೆ. ಮುಂದಿನ ಕ್ರಮಕ್ಕೆ ಇಲಾಖೆಗೆ ಮಾಹಿತಿ ನೀಡುವ ಮೂಲಕ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಪತ್ರ ಬರೆಯುವೆ.
ರಸ್ತೆ ಕಾಮಗಾರಿ ವೇಳೆ ಸಹಾಯಕ ಇಂಜಿನಿಯರ್ ಹಾಜರಿದ್ದರು. ಆದಾಗ್ಯೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲೆಯ ಇಲಾಖೆ ಅಧಿಕಾರಿಗಳ ತಂಡದ ಜತೆ ಖುದ್ದಾಗಿ ಬೇಡಿ ನೀಡಿದ್ದಾರೆ. ಒಂದು ವೇಳೆ ಗುತ್ತಿಗೆದಾರರ ತಪ್ಪಿನಿಂದ ಅಥವಾ ಕಳಪೆ ಸಾಮಗ್ರಿ ಬಳಸಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ.
ಬ್ಯಾಡಗಿ ತಾಲೂಕು ಇಂಗಳಗುಂದಿ ಪ್ಲಾಟ್‌ನ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿರುವುದು.