First budget ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಬಜೆಟ್ ಅನ್ನು ಅಧ್ಯಕ್ಷ ರೂ. ರವೀಂದ್ರ ಮುದಿಯಪ್ಪನವರ ಮಂಡಿಸಿದರು.
ರಟ್ಟಿಹಳ್ಳಿ: ಸ್ಥಳಿಯ ಪಟ್ಟಣ ಪಂಚಾಯಿತಿಯ ಪ್ರಪ್ರಥಮ ಬಜೆಟ್ (First budget) ಅನ್ನು ಪಪಂ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಬುಧವಾರ ಮಂಡಿಸಿದರು.
ಈ ಮೊದಲು ಗ್ರಾಮ ಪಂಚಾಯಿತಿ ಆಗಿದ್ದ ರಟ್ಟಿಹಳ್ಳಿಯು ಇತ್ತೀಚೆಗಷ್ಟೇ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದೆ. ಇದೇ ಮೊದಲ ಬಾರಿಗೆ ಪಪಂ ಬಜೆಟ್ ಮಂಡನೆಯಾಯಿತು.
ಆಸ್ತಿ ತೆರಿಗೆ 46 ಲಕ್ಷ ರೂ., ನೀರಿನ ತೆರಿಗೆ 38 ಲಕ್ಷ ರೂ., ಮಳಿಗೆ ಬಾಡಿಗೆ 24 ಲಕ್ಷ ರೂ., ಸಂತೆ ಶುಲ್ಕ 10 ಲಕ್ಷ ರೂ., ಪರವಾನಗಿ ಶುಲ್ಕ 3 ಲಕ್ಷ ರೂ., ವೇತನ ಅನುದಾನ 59 ಲಕ್ಷ ರೂ., ಬೀದಿದೀಪ ಅನುದಾನ 21 ಲಕ್ಷ, ಕುಡಿಯುವ ನೀರು ಸರಬರಾಜು ವಿದ್ಯುತ್ ಬಿಲ್ 39 ಲಕ್ಷ, ಬರ ಪರಿಹಾರ ಹಾಗೂ ಅತಿವೃಷ್ಟಿ ಅನುದಾನ 10 ಲಕ್ಷ, 16ನೇ ಹಣಕಾಸು ಯೋಜನೆ 2.09 ಕೋಟಿ, ಸಾಮಾನ್ಯ ಮತ್ತು ಇತರೆ ಆದಾಯ 10 ಲಕ್ಷ, ಎಸ್ಎ್ಸಿ 6 ಲಕ್ಷ ರೂ. ಹಾಗೂ ಎಸ್ಬಿಎಂನಿಂದ 30 ಲಕ್ಷ ರೂ. ಸೇರಿದಂತೆ ಅಂದಾಜು 5.05 ಕೋಟಿ ರೂಪಾಯಿ ಆದಾಯ ನಿರೀಸಲಾಗಿದೆ.
ವೆಚ್ಚದ ವಿವರಗಳು: ರಸ್ತೆ ಕಾಮಗಾರಿ, ಚರಂಡಿ (ಗಟಾರ), ಸಿ.ಡಿ. ನಿರ್ಮಾಣ, ಬರ ಪರಿಹಾರ, ಮುದ್ರಣ ಕಾರ್ಯ, ಇತರೆ ವಸ್ತುಗಳ ಖರೀದಿ, ರಸ್ತೆ ಮೆಟ್ಲಿಂಗ್ ಹಾಗೂ ದುರಸ್ತಿ, ನಗರ ನೈರ್ಮಲ್ಯೀಕರಣ, ಆರೋಗ್ಯ ವಿಭಾಗದ ಸಲಕರಣೆಗಳು, ವಾಹನ ಹಾಗೂ ಮೋಟಾರ್ ದುರಸ್ತಿ, ನೀರು ಸರಬರಾಜು ಸಾಮಗ್ರಿಗಳ ಖರೀದಿ, ಬೀದಿದೀಪ ಹಾಗೂ ಸಾರ್ವಜನಿಕ ಉದ್ಯಾನಗಳ ನಿರ್ವಹಣೆ ಸೇರಿದಂತೆ ಒಟ್ಟು 5.03 ಕೋಟಿ ರೂಪಾಯಿ ವೆಚ್ಚದ ಅಂದಾಜು ಮಾಡಲಾಗಿದೆ. ಈ ಮೂಲಕ 2 ಲಕ್ಷ ರೂ.ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.
ಪಪಂ ಉಪಾಧ್ಯ ಶಿವಕುಮಾರ ಉಪ್ಪಾರ ಮತ್ತು ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಮಾತನಾಡಿ, ಪಪಂ ಚುನಾವಣೆ ನಂತರ ಮಂಡನೆಯಾಗಿರುವ ಮೊದಲ ಬಜೆಟ್ ಇದಾಗಿದೆ. ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಪಟ್ಟಣದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ ಎಂದರು.
ಸದಸ್ಯರಾದ ರವಿ ಹದಡೇರ, ಮಲ್ಲಮ್ಮ ರಮೇಶ ಕಟ್ಟೇಕಾರ, ವೀರನಗೌಡ ಪ್ಯಾಟಿಗೌಡ್ರು, ಬಸವರಾಜ ಆಡಿನವರ, ಹರ್ಷದಬಾನು ಅಬ್ಬಾಸ ಗೋಡಿಹಾಳ, ಪಿ.ಡಿ. ಬಸನಗೌಡ್ರು, ಲಕ್ಷಿ$್ಮ ಚಿಕ್ಕಮೊರಬ, ಸರ್ರಾಜ್ ಮಾಸೂರು, ಮಖಬುಲ್ಲಸಾಬ್ ಮುಲ್ಲಾ, ಮಂಜುಳಾ ರಾಮಪ್ಪ ಅಗಡಿ, ಶ್ರೀದೇವಿ ಬೈರಪ್ಪನವರ, ಬಸವರಾಜ ಕಟ್ಟೀಮನಿ, ಲಲಿತಾ ಚೆನ್ನಗೌಡ್ರು ಹಾಗೂ ಸಿಬ್ಬಂದಿ ಗದಗೇಶ ಶಿರಸಿ, ರವೀಂದ್ರ ತಳವಾರ, ರಾಜಕುಮಾರ ಹೇಂದ್ರೆ, ನಿಖಿಲ್ ಅರ್ಕಚಾರಿ, ಸಂತೋಷ ಬಿಳಚಿ, ಮಂಜುನಾಥ ಸುಣಗಾರ ಮತ್ತಿತರರು ಉಪಸ್ಥಿತರಿದ್ದರು.