ರಟ್ಟಿಹಳ್ಳಿ ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣಕ್ಕೆ ನಿಗದಿಯಾಗಿರುವ ಜಾಗ. 
ಹಾವೇರಿ

ರಟ್ಟಿಹಳ್ಳಿಗೆ ಬೇಕು ಸುಸಜ್ಜಿತ ಕ್ರೀಡಾಂಗಣ well-equipped stadium

ವಿವೇಕಾನಂದ ದಾಸನಕೊಪ್ಪ
ತಾಲೂಕು ಕ್ರೀಡಾಂಗಣದ ಸೌಲಭ್ಯವನ್ನು ಕಲ್ಪಿಸಿದರೆ, ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್, ಕಬ್ಬಡಿ, ಖೋಖೋ, ಓಟ ಮುಂತಾದ ಆಟಗಳಿಗೆ ಪೂರಕವಾದ ಕ್ಷೇತ್ರಗಳು, ಟ್ರ್ಯಾಕ್​ಗಳು, ಪ್ರೇಕ್ಷಕರ ಗ್ಯಾಲರಿ, ಶೌಚಗೃಹ ಸೌಲಭ್ಯ, ಕುಡಿಯುವ ನೀರು ಹೀಗೆ ಹಲವಾರು ಸೌಲಭ್ಯ ಲಭ್ಯವಾಗುತ್ತವೆ.
ಸರ್ಕಾರಿ ಶಾಲಾ ಮೈದಾನವೇ ಗತಿ: ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಆಟದ ಮೈದಾನವೇ ಒಂದು ಸಣ್ಣ ಕ್ರೀಡಾಂಗಣವಾಗಿ ಮಾರ್ಪಟ್ಟಿದೆ. ತಾಲೂಕು ಮಟ್ಟದ ಕ್ರೀಡೆಗಳು, ಸರ್ಕಾರಿ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಈ ಮೈದಾನವೇ ಗತಿಯಾಗಿದೆ. ಸಮತಟ್ಟವಲ್ಲದ ಈ ಮೈದಾನದಲ್ಲಿ ಅನಿವಾರ್ಯವಾಗಿ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ದಸರಾ ಕ್ರೀಡಾಕೂಟಗಳು ಇಲ್ಲಿಯೇ ಜರುಗುತ್ತವೆ.
"

ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ವಣಕ್ಕೆ ಸಂಬಂಧಿಸಿದಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಹಸೀಲ್ದಾರರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಮುಂದಾಗಬೇಕಿದೆ.

| ಚಂದ್ರಶೇಖರ ಜಾಡರ, ರಾಷ್ಟ್ರ ಮಟ್ಟದ ಖೋಖೋ ತಂಡದ ಹಿರಿಯ ಕ್ರೀಡಾಪಟು

"

ರಟ್ಟಿಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಜಾಗ ಮಂಜೂರಾಗಿದೆ. ಅಗತ್ಯವಿರುವ ದಾಖಲಾತಿ ಮತ್ತು ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರ ಕಚೇರಿಗೆ ಪ್ರಸ್ತಾವನೆ ಕಳುಸಹಿಸಲಾಗಿದೆ. ಅನುದಾನ ಮಂಜೂರಾದ ಕೂಡಲೇ ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

| ಲತಾ ಬಿ.ಎಚ್., ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾವೇರಿ