ರಟ್ಟಿಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮೇಲೆ ತಾಲೂಕು ಸಾರ್ವಜನಿಕ ಆಸ್ಪತ್ರೆ ನಾಮಫಲಕ. 
ಹಾವೇರಿ

ರಟ್ಟಿಹಳ್ಳಿ ಸಿಎಚ್​ಸಿ ತಾಲೂಕು ಆಸ್ಪತ್ರೆಯಾಗಲಿ taluku hospital

ಪ್ರತಿ ದಿನ ಸರಾಸರಿ 300 ರೋಗಿಗಳು ಚಿಕ್ಸಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 2025ರಲ್ಲಿ ವೈದ್ಯರ ಕೊರತೆಯ ನಡುವೆ 59 ಸಾವಿರ ಹೊರ ರೋಗಿಗಳು (ಒಪಿಡಿ), 3 ಸಾವಿರ ಒಳರೋಗಿಗಳು, ಎಂಎಲ್​ಸಿ 600, ಪಿಎಂ 25, ಹೆರಿಗೆ 130 ಸೇವೆ ನೀಡಿದೆ. ಸದ್ಯ ಆಸ್ಪತ್ರೆಯಲ್ಲಿ ತುರ್ತು ಸೇವಾ ಚಿಕಿತ್ಸೆ, ಕ್ಷ-ಕಿರಣ, ರಕ್ಷ ಪರೀಕ್ಷೆ, ಡಯಾಲಿಸಿಸ್ ಸೇವೆಯನ್ನು ಉತ್ತಮ ರೀತಿಯಲ್ಲಿ ನೀಡಲಾಗುತ್ತಿದೆ.
"

ಹೊಸದಾಗಿ ರಚನೆಯಾದ ಯಾವುದೇ ತಾಲೂಕುಗಳಿಗೆ ಸಾರ್ವಜನಿಕ ಆಸ್ಪತ್ರೆ ಮಂಜೂರಾಗಿಲ್ಲ. ತಾಲೂಕು ಆಸ್ಪತ್ರೆಯಾಗಲು ರಟ್ಟಿಹಳ್ಳಿ ಸಿಎಚ್​ಸಿಗೆ ಎಲ್ಲ ಅರ್ಹತೆ ಇದೆ. ತಾಲೂಕು ಆಸ್ಪತ್ರೆ ಮಂಜೂರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ವೈದ್ಯರ ವರ್ಗಾವಣೆ ಆದೇಶ ಹಿಂಪಡೆಯಲು ಕೋರಿ ಪ್ರಸ್ತಾವನೆ ಕಳುಹಿಸಲಾಗಿದೆ. 

| ಜಯಾನಂದ ಎಂ, ಜಿಲ್ಲಾ ವೈದ್ಯಾಧಿಕಾರಿ ಹಾವೇರಿ. 

"

ತಾಲೂಕು ಕೇಂದ್ರಕ್ಕೆ ಅಗತ್ಯವಾಗಿರುವ ಎಲ್ಲ ಕಚೇರಿ ಸರ್ಕಾರದ ಜವಾಬ್ದಾರಿ. ಸದ್ಯ ಅಗತ್ಯವಾಗಿರುವ ತಾಲೂಕು ಆಸ್ಪತ್ರೆ ಪ್ರಾರಂಭಿಸುವುದನ್ನು ಬಿಟ್ಟು ವೈದ್ಯರನ್ನು ವರ್ಗಾವಣೆ ಮಾಡುತ್ತಿರುವ ನಡೆ ಸೂಕ್ತವಲ್ಲ. ಕೂಡಲೆ ಆದೇಶ ಕೈಬಿಡಬೇಕು ತಾಲೂಕು ಆಸ್ಪತ್ರೆ ಮಂಜೂರು ಮಾಡಬೇಕು, ಹೆರಿಗೆ ಸೌಲಭ್ಯಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಒದಗಿಸಬೇಕು. 

| ಶಂಭಣ್ಣ ಗೂಳಪ್ಪನವರ, ರಟ್ಟಿಹಳ್ಳಿ ನಿವಾಸಿ.