ಜಾನುವಾರು ಕಳ್ಳತನ ಮಾಡಿದ್ದ ಆರೋಪಿಯನ್ನು ರಟ್ಟಿಹಳ್ಳಿ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿರುವುದು. ಪಿಎಸ್ಐ ರಮೇಶ ಪಿ.ಎಸ್., ಚಂದ್ರಶೇಖರ ವಿಭೂತಿ, ಸಿಬ್ಬಂದಿ ಇದ್ದರು.
ರಟ್ಟಿಹಳ್ಳಿ: ತಾಲೂಕಿನ ಮಕರಿ ಮತ್ತು ಶಿರಗಂಬಿ ಗ್ರಾಮದಲ್ಲಿ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಜಾನುವಾರುಗಳ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೂಲತಃ ಶಿಕಾರಿಪುರ ತಾಲೂಕಿನ ಕವಾಸಪುರದ, ಸದ್ಯ ಮಾಸೂರಿನ ನಿವಾಸಿ ವಾಜೀದ ಹುಸೇನ್ಸಾಬ್ ಗದಗ ಬಂಧಿತ.
ಕಳೆದ ಎರಡು ತಿಂಗಳಲ್ಲಿ ಶಿರಗಂಬಿ ಮತ್ತು ಮಕರಿ ಗ್ರಾಮದಲ್ಲಿ ಜಾನುವಾರುಗಳ ಕಳ್ಳತನವಾಗಿದ್ದ ಬಗ್ಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಯಶೋಧಾ ವಂಟಗೋಡಿ, ಎಎಸ್ಪಿ ಎಲ್.ವೈ. ಶಿರಕೋಳ, ಡಿಎಸ್ಪಿ ಲೋಕೇಶ ಜೆ., ಮತ್ತು ಸಿಪಿಐ ಮಂಜುನಾಥ ಪಂಡಿತ್ ಅವರ ಮಾರ್ಗದರ್ಶನದಲ್ಲಿ ಸ್ಥಳಿಯ ಪಿಎಸ್ಐ ರಮೇಶ ಪಿ.ಎಸ್. ಚಂದ್ರಶೇಖರ ವಿಭೂತಿ ನೇತೃತ್ವದ ತಂಡ ರಚಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ವಾಜೀದ ಗದಗ ಎಂಬಾತನನ್ನು ಬಂಧಿಸಿ, ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಒಂದು ಬೊಲೇರೋ ವಾಹನ ಮತ್ತು ಒಂದು ಮೊಬೈಲ್ ೋನ್ ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಇಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವ ಬಗ್ಗೆ ಆರೋಪಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಸಿಬ್ಬಂದಿ ಮಾಲತೇಶ ನ್ಯಾಮತಿ, ರವಿ ಅಳಲಗೇರಿ, ಬಸವರಾಜ ಸಣ್ಣಪ್ಪನವರ, ರವಿ ಲಮಾಣಿ, ರಿಯಾಜ್ ದೊಡ್ಡಮನಿ, ಹರೀಶ ಹಲಗೇರಿ, ದೇವೆಂದ್ರಪ್ಪ ದೊಡ್ಡಮನಿ, ಎಂ.ಜಿ. ಮಲ್ಲನಗೌಡ್ರು, ಕುಮಾರ ಬಳ್ಳಾರಿ, ಗಣೇಶ ಹಳ್ಳಳ್ಳಿ, ಬಸವರಾಜ ಕೊರವರ, ಬಸವರಾಜ ಬಾಗೋಡಿ, ಮಲ್ಲಿಕಾರ್ಜುನ ನಾಗವಂದ, ರಮೇಶ ಬಡಿಗೇರ, ಮಾರುತಿ ಹಾಲಭಾವಿ, ಸತೀಶ ಮರಕಟ್ಟಿ ಇತರರನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.