ಎತ್ತು ಸಾವು 
ಹಾವೇರಿ

ಮಳೆಯಿಂದ ಸಿಡಿಲು ಬಡಿದು ಎತ್ತು ಸಾವು

ಕರಿಯಪ್ಪ ಅರಳಿಕಟ್ಟಿ

ರಾಣೆಬೆನ್ನೂರು: ಸಿಡಿಲು ಬಡಿದು ಎತ್ತು ಮೃತಪಟ್ಟ ಟನೆ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಕುಬೇರಪ್ಪ ಮಾಸಣಗಿ ಎಂಬುವರ ಎತ್ತು ಮೃತಪಟ್ಟಿರುವುದು.

ಇವರು ಮನೆ ಹಿಂಭಾಗದಲ್ಲಿ ಎತ್ತು ಕಟ್ಟಿದ್ದರು. ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಸಿಡಿಲು ಬಿಡಿದು ಮೃತಪಟ್ಟಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತ ಕುಬೇರಪ್ಪ ಮಾಸಣಗಿ ಕುಟುಂಬದವರು ಸಾಂಪ್ರದಾಯಿಕವಾಗಿ ಮೃತ ಎತ್ತಿನ ಅಂತ್ಯಸಂಸ್ಕಾರ ನೆರವೇರಿಸಿದರು.