ಬ್ಯಾಡಗಿ ಪುರಸಭೆ ಎದುರು ನಿವೇಶನಗಳ ಹಕ್ಕುಪತ್ರ (site deed)ವಿತರಿಸುವಂತೆ ಆಗ್ರಹಿಸಿ ನಗರ ಆಶ್ರಯ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. 
ಹಾವೇರಿ

site deed ಹಕ್ಕುಪತ್ರಕ್ಕಾಗಿ ಬ್ಯಾಡಗಿ ಪುರಸಭೆ ಎದುರು ಪ್ರತಿಭಟನೆ

ಬ್ಯಾಡಗಿ: ಅರ್ಹರಿಗೆ ನಿವೇಶನ ಆಯ್ಕೆ ಪಟ್ಟಿ ಘೋಷಣೆ, ಅನರ್ಹರ ಹೆಸರು ರದ್ದುಪಡಿಸುವುದು, ಆಯ್ಕೆ ಬಳಿಕ ಹಕ್ಕುಪತ್ರ (site deed) ವಿತರಣೆಗೆ ಆಗ್ರಹಿಸಿ ನಗರ ಆಶ್ರಯ ಹೋರಾಟ ಸಮಿತಿ ಆಶ್ರಯದಲ್ಲಿ ಪಟ್ಟಣದ ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಅಧ್ಯೆ ರೀದಾಬಾನು ನದಿಮುಲ್ಲಾ, 10 ವರ್ಷಗಳ ಹಿಂದೆ ಪುರಸಭೆ ಜಾಗ ಖರೀದಿಸಿ ಖಾಲಿ ಬಿಟ್ಟಿದೆ. ಈ ಹಿಂದೆ ವಸತಿ ಸಚಿವರು ಕೆಲವರಿಗೆ ಹಕ್ಕಪತ್ರ ವಿತರಿಸಿದ್ದು, ಉಳಿದವರಿಗೆ ಈವರೆಗೂ ವಿತರಣೆ ಮಾಡಿಲ್ಲ. ಬಡವರಿಗೆ ನಿವೇಶನ ನೀಡಲು ಹಿಂದೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಕೆಲ ಅನರ್ಹರ ಹೆಸರು ಪತ್ತೆ ಮಾಡಲಾಗಿದೆ. ಅಂತಹವರನ್ನು ಯಾವುದೇ ಕಾರಣಕ್ಕೂ ಯಾರ ಒತ್ತಡವಿದ್ದರೂ ಸೇರ್ಪಡೆಗೊಳಿಸದೆ, ಅರ್ಹರಿಗೆ ಉಚಿತ ನಿವೇಶನ ಹಂಚಿಕೆ ಪ್ರಕ್ರಿಯೆ ರ್ಪೂಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ನಗರ ಆಶ್ರಯ ಸಮಿತಿ ಅಧ್ಯ ಮುನಾಲಿ ಎರೆಸೀಮೆ ಮಾತನಾಡಿ, ಕಳೆದ ನಾಲ್ಕು ದಿನಗಳ ಹಿಂದೆ ಪುರಸಭೆ ಆಡಳಿತಾಧಿಕಾರಿಗಳು, ಶಾಸಕರು ಹಾಗೂ ಮುಖ್ಯಾಧಿಕಾರಿ, ಆಶ್ರಯ ಸಮಿತಿ ಸದಸ್ಯರು ಜಂಟಿಯಾಗಿ ಸಭೆ ನಡೆಸಿ, ಹಲವು ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಲಾನುಭವಿಗಳ ಆಯ್ಕೆಪಟ್ಟಿಗೆ ಅಂತಿಮ ಅಂಕಿತ ಹಾಕಲಾಗಿದೆ. ಶ್ರೀದಲ್ಲಿ 351 ಜನರಿಗೆ ನೋಂದಣಿ ರ್ಪೂಣಗೊಳಿಸಿ ಹಕ್ಕುಪತ್ರ ವಿತರಣೆ ನಡೆಯಲಿದೆ. ಉಳಿದವರಿಗೂ ಹಾಗೂ ಉಳಿದ ನಿವೇಶನಗಳ ಲಾನುಭವಿಗಳಿಗೆ ವಿತರಣೆ ನಡೆಯಲಿದೆ. ಎಲ್ಲರಿಗೂ ಈ ನಿವೇಶನಗಳನ್ನು ನೀಡಲು ಸಾಧ್ಯವಾಗುವುದಿಲ್ಲ, ಹಳೆಯ, ಹೊಸ ಅಜಿರ್ ಪರಿಶೀಲಿಸಿ ಜಾಗ ಪಡೆದುಕೊಂಡು ಎಲ್ಲರಿಗೂ ವಿತರಣೆ ನಡೆಯಲಿದೆ. ಈ ಹಿಂದೆ ಮನೆ ಸಲುವಾಗಿ 30 ಸಾವಿರ ರೂ. ವಂತಿಗೆ ಪಾವತಿಸಿದವರಿಗೆ ಬಡ್ಡಿ ಸಮೇತ ಹಣ ವಾಪಸ್​ ಅವರ ಖಾತೆಗೆ ಜಮೆ ಮಾಡಲು ಸಮಿತಿ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನಂಬಬೇಡಿ, ಯಾರಿಗೂ ನಯಾಪೈಸೆ ಕೊಡಬೇಡಿ, ನಿವೇಶನ ಉಚಿತವಾಗಿ ವಿತರಣೆಯಾಗಲಿವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಆಶ್ರಯ ಸಮಿತಿ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಅಬ್ದುಲ್​ ಮಜೀದ್​ ಮುಲ್ಲಾ, ಸುರೇಶ ಚಲವಾದಿ, ಪಾಂಡುರಂಗ ಸುತಾರ, ಗುತ್ತೆವ್ವ ಮಾಳಗಿ ಇತರರಿದ್ದರು.