ಸವಣೂರು ಪಟ್ಟಣದ ಕಂದಾಯ ಇಲಾಖೆ ಕಚೇರಿ ಎದುರು ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ಆಗದಂತೆ ಕಟ್ಟು ನಿಟ್ಟಿನ ಆದೇಶ ನೀಡುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಅವರಿಗೆ ಮನವಿ ಸಲ್ಲಿಸಲಾಯಿತು. ಅರುಣ ಬಗರೆ, ಹನುಮಂತಗೌಡ ಮುದಿಗೌಡ್ರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವಣೂರು
ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ಆಗದಂತೆ ಕಟ್ಟು ನಿಟ್ಟಿನ ಆದೇಶ ನೀಡುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್-ಭಜರಂಗದಳ ಗೋ ರಕ್ಷಾ ವಿಭಾಗದ ಕರ್ನಾಟಕದ ಪ್ರಾಂತ ಪದಾಧಿಕಾರಿಗಳು ಗುರುವಾರ ಸವಣೂರಿನ ಕಂದಾಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಹಾಗೂ ಪಿಐ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 (2020ರ ವಿಧಾನಸಭೆಯ ವಿಧೇಯಕ ಸಂಖ್ಯೆ-69) ಸರ್ಕಾರದ ಆದೇಶವಿದ್ದರೂ ಸರ್ಕಾರದ ಆದೇಶ ಗಾಳಿಗೆ ತುರಿ ಗೋಹತ್ಯೆ ನಡೆಯುತ್ತಿದೆ. ಹಿಂದೂ ಸಂಪ್ರದಾಯದ ಪ್ರಕಾರ ಗೋವನ್ನು 33 ಕೋಟಿ ದೇವಾನು ದೇವತೆಗಳ ಸಮಾನವೆಂದು ಪೂಜಿಸಿ, ಆರಾಧಿಸುವ ಸಂಸ್ಕೃತಿ ನಮ್ಮದು. ಗೋ ಹತ್ಯೆಯಿಂದ ಹಿಂದೂಗಳ ಭಾವನೆಗೆ ಘಾಸಿಯಾಗುತ್ತಿದೆ ಎಂದರು.
ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಮನವಿ ಸ್ವೀಕರಿಸಿದರು. ಗೋ ರಕ್ಷಾ ವಿಭಾಗದ ಕರ್ನಾಟಕದ ಪ್ರಾಂತ ಪದಾಧಿಕಾರಿಗಳಾದ ಅರುಣ ಬಗರೆ, ಹನುಮಂತಗೌಡ ಮುದಿಗೌಡ್ರ, ಮಹೇಶ ಮುದಗಲ್, ಸಮೀತ ಕೆಮ್ಮಣಕೇರಿ, ದುರಗಪ್ಪ ಗಡೇದ, ವಿನಾಯಕ ಕುಲಕರ್ಣಿ, ವಿರೇಶ ಕಳಪ್ಪನವರ, ಪ್ರವೀಣ ಬಾಲೇಹೊಸೂರ, ಸುನೀಲ ಹೊಸೂರ, ವಿನಾಯಕ ಹಲಸೂರ, ಕಾತೀಕ ಹಿರೇಮಠ, ಮಾಂತೇಶ ಮಾನೇಗಾರ, ದೇವರಾಜ ಭಜಂತ್ರಿ, ಪವನ ರಸಾಳಕರ, ರವಿ ತೋಟದ, ಪ್ರವೀಣ ಚೌವ್ಹಾಣ, ಸಂತೋಷ ಆಲೂರ, ಶಿವಾನಂದ ಹಣಗಿ ಹಾಗೂ ಇತರರು ಇದ್ದರು.