Prepare children for global competitionಹಾನಗಲ್ಲ ತಾಲೂಕಿನ ಕಂಚಿನೆಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಮ್ಮ ಶಾಲೆ ನಮ್ಮ ಮಕ್ಕಳ ಭವಿಷ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯೋಪಾಧ್ಯಾಯ ಎಲ್.ಕೆ. ಗೆಜ್ಜಿಹಳ್ಳಿ, ಮಾರುತಿ ಶಿಡ್ಲಾಪೂರ, ಮಹಾಂತೇಶ ಹರಕುಣಿ, ಎಸ್.ಸಿ. ಚಿಕ್ಕಮಠ ಇದ್ದರು. 
ಹಾವೇರಿ

global competition ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಅಣಿಗೊಳಿಸಿ

ವಿವೇಕಾನಂದ ದಾಸನಕೊಪ್ಪ
ಹಾನಗಲ್ಲ: ಬದುಕಿನ ಶಿಕ್ಷಣಕ್ಕಾಗಿ ಹಾತೊರೆಯುವ ಈ ಕಾಲದಲ್ಲಿ ಮಕ್ಕಳ ಪಾಲಕರು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಿದೆ. ಜತೆಗೆ ಜಾಗತಿಕ ಸ್ಪರ್ಧೆಗೆ (global competition)ಮಕ್ಕಳನ್ನು ಸಿದ್ಧಗೊಳಿಸಬೇಕಿದೆ ಎಂದು ಮುಖ್ಯೋಪಾಧ್ಯಾಯ ಎಲ್.ಕೆ. ಗೆಜ್ಜಿಹಳ್ಳಿ ಹೇಳಿದರು.
ತಾಲೂಕಿನ ಕಂಚಿನೆಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಮಕ್ಕಳ ಭವಿಷ್ಯ ಕುರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಔಪಚಾರಿಕ ಶಿಕ್ಷಣದ ಕಾಲವೀಗ ಬದಲಾಗಿದೆ. ಸ್ಪರ್ಧಾತ್ಮಕ ಯೋಜನೆ, ಯೋಚನೆಯಿಂದ ನಮ್ಮ ಮಕ್ಕಳ ಭವಿಷ್ಯ ಕಟ್ಟಲು ಸಾಧ್ಯ. ಗ್ರಾಮೀಣ ಮಕ್ಕಳಲ್ಲಿನ ಪ್ರತಿಭೆ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಉತ್ತಮ ಸೌಲಭ್ಯಗಳು ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ಮಾತ್ರ ನೀಡುವ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಕಾಳಜಿಯಿಂದ ಕೆಲಸ ಮಾಡಬೇಕಾಗಿದೆ. ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಬಲ್ಲದು. ಸರ್ಕಾರ ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸಿದೆ. ಹಳ್ಳಿಗಳಲ್ಲಿ ಪ್ರೌಢ, ಕಾಲೇಜು ಶಿಕ್ಷಣವೂ ಲಭ್ಯವಿದೆ. ಅದರ ಸದುಪಯೋಗವನ್ನು ಪಡೆಯುವಲ್ಲಿ ನಾವೆಲ್ಲ ಕಾಳಜಿ ವಹಿಸಬೇಕು ಎಂದರು.
ಶಿಕ್ಷಕರಾದ ಎಸ್.ಸಿ. ಚಿಕ್ಕಮಠ, ಸಂಜೀವ ಮಾಳಗಿ, ಚಂದ್ರಶೇಖರ ಹಂಚಿನಮನಿ, ಮಾಲತೇಶ ಇದ್ದರು.