ಬಂಕಾಪುರ ಪಟ್ಟಣದ ಶ್ರೀ ಬಂಕನಾಥಸ್ವಾಮಿ ಯುವಕ ಮಂಡಳದ ಆಶ್ರಯದಲ್ಲಿ ಮಳೆಗಾಗಿ ಪ್ರಾಥಿರ್ಸಿ ಕಪ್ಪೆಯ ಮದುವೆ ಮಾಡಿಸಲಾಯಿತು. ಬಸವರಾಜ ಉಳ್ಳಾಗಡ್ಡಿ, ಸೋಮಶೇಖರ ಆದವಾನಿಮಠ, ಭರಮಪ್ಪ ಕಮ್ಮಾರ ಇದ್ದರು.
ಬಂಕಾಪುರ: ಪಟ್ಟಣದ ಶ್ರೀ ಬಂಕನಾಥಸ್ವಾಮಿ ಯುವಕ ಮಂಡಳದ ಆಶ್ರಯದಲ್ಲಿ ಮಳೆಗಾಗಿ ಪ್ರಾಥಿರ್ಸಿ ಕಪ್ಪೆಯ ವಿವಾಹ ಮಹೋತ್ಸವ ಮಂಗಳವಾರ ಜರುಗಿತು.
ಶ್ರೀ ಬಂಕನಾಥಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡ ಕಪ್ಪೆಯ ವಿವಾಹ ಮಹೋತ್ಸವದ ಮೆರವಣಿಗೆಯು ಶ್ರೀ ಬಂಕನಾಥ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು. ಪ್ರತಿ ಮನೆಯ ಮುತೆದೆಯರು ಕಪ್ಪೆಯ ಮೇಲೆ ನೀರು ಸುರಿದು, ಅರಿಷಿಣ, ಕುಂಕುಮ ಧರಿಸಿ ಹೂ ಹಾಕಿ ಸಮೃದ್ಧ ಮಳೆ ಧರೆಗಿಳಿಸಿ ಉತ್ತಮ ಸಲು ನೀಡುವಂತೆ ಪ್ರಾಥಿರ್ಸಿದರು.
ತನ್ನಿಮಿತ್ತ ಪ್ರಾತಃಕಾಲ ಬಸಯ್ಯಸ್ವಾಮಿ ಕಡ್ಲಯ್ಯನವರಮಠ ಶಾಸ್ತ್ರಿಗಳಿಂದ ಶ್ರೀ ಬಂಕನಾಥಸ್ವಾಮಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಸಹಸ್ರನಾಮಾವಳಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ ಪ್ರಸಾದ ವಿತರಣೆ ನಡೆಯಿತು.
ಶ್ರೀ ಬಂಕನಾಥ ಸ್ವಾಮಿ ಸೇವಾ ಸಮಿತಿ ಸದಸ್ಯರಾದ ಸೋಮಶೇಖರ ಆದವಾನಿಮಠ, ಡಾ.ರಾಜು ಈಳಗೇರ, ಸಂಗಪ್ಪ ಮುರಿಗೆಣ್ಣವರ, ಮಾಲತೇಶ ಕೊಣನಕೇರಿ, ಕೆಂಪಯ್ಯ ಆದವಾನಿಮಠ, ಬಸವರಾಜ ಮುರಿಗೆಣ್ಣವರ, ಬಸವರಾಜ ಉಳ್ಳಾಗಡ್ಡಿ, ಮಾಲತೇಶ ಕೋಣನಕೇರಿ, ಚನ್ನಪ್ಪ ಪಟ್ಟಣಶೆಟ್ಟರ, ಕಿರಣ ಸಜ್ಜನಗೌಡ್ರ, ಭರಮಪ್ಪ ಕಮ್ಮಾರ, ಕಾತಿರ್ಕ ಸಜ್ಜನಶೆಟ್ಟರ, ರವಿ ಬಡ್ಡಿ, ನಾಗರಾಜ ಚಿಲ್ಲೂರ, ಗಂಗಾಧರ ಮುರಿಗೆಣ್ಣವರ ಸೇರಿದಂತೆ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.