ನವಿಲು ಬೇಟೆಯಾಡಿದ (Peacock hunter) ಆರೋಪಿ ವಶಕ್ಕೆ ಪಡೆದ ಅರಣ್ಯ ಇಲಾಖೆ ತಂಡ. 
ಹಾವೇರಿ

Peacock hunter ನವಿಲು ಬೇಟೆಯಾಡಿದವನ ಬಂಧನ

ವಿವೇಕಾನಂದ ದಾಸನಕೊಪ್ಪ
ಹಿರೇಕೆರೂರು: ಎರಡು ನವಿಲು ಬೇಟೆಯಾಡಿದ (Peacock hunter) ಆರೋಪಿಯನ್ನು ಅರಣ್ಯ ಇಲಾಖೆ ಅಧಿ-ಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ತಾಲೂಕಿನ ಯತ್ತಿನಹಳ್ಳಿ ಎಂ.ಕೆ. ಗ್ರಾಮದ ಕಾತಿರ್ಕ ರಾಮಪ್ಪ ಮಡಿವಾಳರ ಬಂ-ಧಿತ. ಈತ ಹಿರೇಕೆರೂರು ಅರಣ್ಯ ವಲಯದಲ್ಲಿ 2 ನವಿಲು ಬೇಟೆಯಾಡಿದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಅಬಲೂರು& ಯತ್ತಿನಹಳ್ಳಿ ಎಂ.ಕೆ. ರಸ್ತೆಯಲ್ಲಿ ಬೈಕ್​, ಟಾರ್ಚ್​ ಮತ್ತು 2 ಸಾವನ್ನಪ್ಪಿದ ನವಿಲುಗಳು ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾತಿರ್ಕ ಮಡಿವಾಳರ ವಿರುದ್ಧ ದೂರು ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವಿಜಯ ಮುಡಬಾಗಿಲ, ಉಪವಲಯ ಅರಣ್ಯಾಧಿಕಾರಿಗಳಾದ ಸುರೇಶ ಬಟ್ಟೂರ, ಸಾದಿಕ್​ ಪೆಂಡಾರಿ ಮತ್ತು ಸಿಬ್ಬಂದಿ ಇದ್ದರು.