Crime 
ಹಾವೇರಿ

ಪೆಹಲ್ಗಾಮ್ ಉಗ್ರನ ನಂಟಿನ ನೆಪವೊಡ್ಡಿ 21.50 ಲಕ್ಷ ರೂ. ವಂಚನೆ

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ಸಿಬಿಐ ಹಾಗೂ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಪೆಹಲ್ಗಾಮ್ ಅಟ್ಯಾಕ್ ಉಗ್ರನ ಜತೆ ನಂಟು ಇದೆ ಎಂದು ಹೆದರಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 21.50 ಲಕ್ಷ ರೂ. ವಸೂಲಿ ಮಾಡಿರುವ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗಭೂಷಣ ಎಂಬುವರಿಗೆ ಮೋಸ ಮಾಡಿರುವುದು.

ಇವರಿಗೆ ಪರಿಚಿತಗಳಾದ ರಣಭೀರ ಸಿಂಗ್ ಮತ್ತು ಪ್ರದಿಪ ಕುಮಾರ ಎಂಬುವರು ೋನ್ ಮಾಡಿ ನಾವು ಸಿಬಿಐ ಹಾಗೂ ಇಡಿ ಅಧಿಕಾರಿಗಳಾಗಿದ್ದೇವೆ. ನಿನ್ನ ಮೇಲೆ ಮನಿ ಲ್ಯಾಂಡರಿಂಗ್ ಪ್ರಾಡ್ ಕೇಸು ದಾಖಲಾಗಿದೆ. ನೀನು ಪೆಹಲ್ಗಾಮ್ ಅಟ್ಯಾಕ್ನಲ್ಲಿ ಉಗ್ರ ಅದಿಲ್ಗೋರಿಯೊಂದಿಗೆ ವ್ಯವಹಾರ ಮಾಡಿದ್ದೀಯಾ. ಆತ ನಿನ್ನ ಆಧಾರ ಕಾರ್ಡ್ ಬಳಿಸಿಕೊಂಡು ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಮನಿ ಲ್ಯಾಂಡರಿಂಗ್ ಮೂಲಕ ಹಣ ವರ್ಗಾವಣೆ ಶೇ. 15ರಷ್ಟು ಲಾಂಭಾಂಶ ಪಡೆದುಕೊಂಡಿದ್ದೀಯಾ.

ಅದಿಲ್ಗೋರಿ ಉಗ್ರರು ನಮ್ಮ ಬಳಿ ಸಿಕ್ಕಿದ್ದಾರೆ. ಅವರು ನಿನ್ನ ಹೆಸರನ್ನು ಹಾಗೂ ಆಧಾರ ಕಾರ್ಡ್ನ್ನು ತೋರಿಸಿ ನೀವು ಇದರಲ್ಲಿ ಭಾಗಿ ಯಾಗಿದ್ದಿರಿ. ನಿನ್ನ ಹೆಸರನ್ನು ಇಲ್ಲಿ ಹೇಳಿದ್ದಾರೆ. ಬ್ಯಾಂಕ್ ಖಾತೆ ತರೆಯಲು ಸಹಿ ಮಾಡಿ ಸಹಾಯ ಮಾಡಿದ್ದೀರಿ ಎಂದು ಹೇಳಿದ್ದಾರೆ. ನೀನು ಭಾಗಿಯಾಗಿ ಅಕ್ರಮ ಹಣ ವರ್ಗಾವಣೆ ಕಾರ್ಯಾಚರಣೆಯಲ್ಲಿ ಬ್ಯಾಂಕ್ ಖಾತೆ ಸೇರಿದಂತೆ ಬಹು ಬ್ಯಾಂಕಿಂಗ್ ಮಾರ್ಗಗಳನ್ನು ಬಳಸಿಕೊಂಡು ವಂಚನೆ ಮಾಡಿ ಹಣ ವರ್ಗಾವಣೆ ಮಾಡಿದ್ದೀಯಾ. ಈಗಾಗಲೆ ಆರ್ಬಿಐದವರು ಶಂಕಿತರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. 45 ವ್ಯಕ್ತಿಗಳು ಸುಳ್ಳು ದಾಖಲತಿಗಳನ್ನು ತೋರಿಸಿ ಖಾತೆ ತೆರೆದಿದ್ದು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಆದ್ದರಿಂದ ನೀನು ಕೂಡ ವಿಚಾರಣೆಗೆ ಬರಬೇಕು ಎಂದು ನಿನಗೆ ಕರೆ ಮಾಡಿದ್ದೇವೆ ಎಂದು ನಾಗಭೂಷಣ ಜತೆ 12 ಗಂಟೆಗಳ ಕಾಲ ಮಾತನಾಡಿದ್ದಾರೆ.

ಅಲ್ಲದೆ ಸಿಬಿಐ ಹಾಗೂ ಪೊಲೀಸರಂತೆ ಡ್ರೆಸ್ ಹಾಕಿಕೊಂಡು ವೀಡಿಯೊ ಕಾಲ್ ಮಾಡಿ ಹೆದರಿಸಿದ್ದಾರೆ. ಇದರಿಂದ ಹೆದರಿದ ನಾಗಭೂಷಣ ಅವರು ಹೇಳಿದಂತೆ ಹಣ 21.50 ಲಕ್ಷ ರೂ.ಅನ್ನು ತನ್ನ ವಿವಿಧ ಖಾತೆಗಳಿಂದ ವರ್ಗಾವಣೆ ಮಾಡಿದ್ದಾರೆ. ನಂತರ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.