ಸವಣೂರು ತಾಪಂ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿದರು. ಕಲ್ಯಾಣಿ ಕಾಂಬಳೆ, ರವಿಕುಮಾರ ಕೊರವರ, ಬಿ.ಎಸ್​. ಶಿಡೇನೂರ ಇತರರಿದ್ದರು. 
ಹಾವೇರಿ

illegal liquor ಅಕ್ರಮ ಮದ್ಯ ಮಾರಾಟ ತಡೆಯದ್ದಕ್ಕೆ ಆಕ್ರೋಶ

ಸವಣೂರು: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಆವರಣಕ್ಕೆ ಹೊಂದಿಕೊಂಡಿರುವ ಪಾನ್​ಬೀಡಾ ಅಂಗಡಿಗಳಲ್ಲಿ ಅಕ್ರಮ ಮದ್ಯ (illegal liquor) ಮಾರಾಟದ ವಿಷಯಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿಯನ್ನು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತರಾಟೆಗೆ  ತೆಗೆದುಕೊಂಡರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೆಮಾಸಿಕ ಕೆಡಿಪಿ ಸಭೆಯಲ್ಲಿ ರುದ್ರಪ್ಪ ಲಮಾಣಿ ಅವರು ಗ್ರಾಮೀಣ ಜನರಿಂದ ಬಹಳಷ್ಟು ದೂರುಗಳು ಕೇಳಿಬರುತ್ತಿವೆ. ಇದಕ್ಕೆ ನೀವೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಆಗ ತಡಬಡಾಯಿಸಿದ ಅಬಕಾರಿ ಇಲಾಖೆ ಪಿಐ ಹನುಮಂತಪ್ಪ, ನಾನು ಅತ್ಯಂತ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸರ್ಕಾರ ನೀಡಿದ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದರು. ಇದರಿಂದ ಆಕ್ರೋಶಗೊಂಡ ಕೆಡಿಪಿ ಸದಸ್ಯೆ ಹನುಮವ್ವ ಪಡೆಯಪ್ಪನವರ, ಅಕ್ರಮ ಮದ್ಯ ಮಾರಾಟದ ಕುರಿತು ನಿಮಗೆ ಮಾಹಿತಿ ನೀಡಿದರೆ, ನೀವೇ ಮಾರಾಟಗಾರರಿಗೆ ಮಾಹಿತಿ ನೀಡಿ ದಾಳಿ ಬರುತ್ತೀರಿ. ನೀವು ಬಂದು ಹೋದ ಎರಡ್ಮೂರು ದಿನಗಳಲ್ಲೇ ಅವರು ಮತ್ತೆ ಮಾರಾಟ ಆರಂಭಿಸುತ್ತಾರೆ ಎಂದು ಹರಿಹಾಯ್ದರು. ಆಗ ರುದ್ರಪ್ಪ ಲಮಾಣಿ, ಇದು ಇಡೀ ರಾಜ್ಯದ ಸಮಸ್ಯೆ. ಅಧಿಕಾರಿಗಳಿಗೆ ಮದ್ಯ ಮಾರಾಟದ ಗುರಿ ನೀಡದಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯ ಸುಭಾಸ ಮಜ್ಜಗಿ ಮಾತನಾಡಿ, ತಾಲೂಕಿನಲ್ಲಿ ನಕಲಿ ಪಡಿತರ ಚೀಟಿ ವಿತರಕರ ಹಾವಳಿ ಹೆಚ್ಚಾಗಿದೆ. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಉತ್ತರಿಸಿದ ಆಹಾರ ನಿರೀಕ ಡಿ.ಎಂ. ಪಾಟೀಲ, ನಕಲಿ ಪಡಿತರ ಚೀಟಿ ತಯಾರಿಸಿ ಕೊಡುತ್ತಿರುವ ಬಗ್ಗೆ ಮಾಹಿತಿ ಪಡೆದು, ತಾಲೂಕಿನಲ್ಲಿ ಒಟ್ಟು 58 ನಕಲಿ ಪಡಿತರ ಚೀಟಿ ರದ್ದುಪಡಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದರು.
ಬಿಇಒ ಎಂ.ಎ್​. ಬಾಕಿರ್ ಅವರು ತಾಲೂಕಿನಲ್ಲಿ ಶಿಕರ ಕೊರತೆಯಿದೆ. ಸರ್ಕಾರ ಈಗಾಗಲೇ 160 ಅತಿಥಿ ಶಿಕರನ್ನು ನೀಡಿದ್ದರೂ, ಇನ್ನಷ್ಟು ಶಿಕರ ಬೇಡಿಕೆಯಿದೆ. ತಾಲೂಕಿನ 127 ಶಾಲೆಗಳ ದುರಸ್ತಿಗಾಗಿ ಪರಿಶೀಲನೆ ನಡೆಸಲಾಗಿದ್ದು, 103 ಕೊಠಡಿ ತೆರವು ಮಾಡಬೇಕಿದೆ. ಹೆಸರೂರು ಗ್ರಾಮದ ಶಾಲೆಗೆ ಜಾಗ ನೀಡಲು, ಸರ್ಕಾರದ ಮಟ್ಟದಲ್ಲಿ ಮೊಟ್ಟೆಗೆ ನೀಡುವ ಹಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ತಾಲೂಕಿನಲ್ಲಿ ಜೆಜೆಎಂ ಯೋಜನೆ ಕಾಮಗಾರಿಗಳು ಸಂರ್ಪೂಣ ಕಳಪೆಯಾಗಿವೆ. ಈ ಕುರಿತು ಸೂಕ್ತ ತನಿಖೆ ನಡೆಸಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಡಿಪಿ ಸದಸ್ಯರು ಒತ್ತಾಯಿಸಿದರು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಲು ಮುಂದಾಗಬೇಕು ಎಂದು ಪುರಸಭೆ, ಪಶು ಸಂಗೋಪನೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು. ಶಾಲೆ ಹಾಗೂ ಅಂಗನವಾಡಿ ಕಟ್ಟಡ ನಿಮಿರ್ಸಲು ಶಿಣ ಮತ್ತು ಸಿಡಿಪಿಒ ಇಲಾಖೆಗೆ ಸೂಕ್ತ ನಿವೇಶನ ನೀಡಬೇಕು ಹಾಗೂ ಸ್ವಂತ ಕಟ್ಟಡ ಹೊಂದಿರುವ ಕಡೆಗಳಲ್ಲಿ ಇ&ಸ್ವತ್ತು ಮಾಡಿಕೊಡಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್​ ರವಿಕುಮಾರ್​ ಕೊರವರ, ತಾಪಂ ಇಒ ಬಿ.ಎಸ್​. ಶಿಡೇನೂರ, ವಿಶೇಷಾಧಿಕಾರಿ ಡಾ. ಶ್ರೀಪಾದ, ಸಹಾಯಕ ಕೃಷಿ ನಿರ್ದೇಶಕಿ ಸವಿತಾ ಚಕ್ರಸಾಲಿ ಇತರರು ಉಪಸ್ಥಿತರಿದ್ದರು.