15 ದಿನಗಳ ಹಿಂದಷ್ಟೆ ವಿವಾಹವಾಗಿದ್ದ ನವದಂಪತಿ ದುರಂತ ಸಾವು! Newly Married Couple
- ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಅಪಘಾತ
- 15 ದಿನಗಳ ಹಿಂದೆಯಷ್ಟೆ ವಿವಾಹವಾಗಿದ್ದ ನವದಂಪತಿ ದುರಂತ ಸಾವು
- ನಸುಕಿನ ಜಾವ ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು
Newly Married Couple : ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಅಪಘಾತದಲ್ಲಿ 15 ದಿನಗಳ ಹಿಂದೆಯಷ್ಟೆ ವಿವಾಹವಾಗಿದ್ದ ನವದಂಪತಿ ದುರಂತವಾಗಿ ಮೃತಪಟ್ಟಿದ್ದಾರೆ.
ಹಾವೇರಿಯ ಹಿರಿಯ ಪತ್ರಕರ್ತ ದಿ.ಗಂಗಾಧರ ಹೂಹಾರ ಪುತ್ರ ಕಾರ್ತಿಕ ಹೂಗಾರ (33) ಹಾಗೂ ಕಾರ್ತಿಕ ಪತ್ನಿ ಐಶ್ವರ್ಯ (26) ಮೃತಪಟ್ಟವರು. ಮತ್ತಿಬ್ಬರು ಗಾಯಗೊಂಡಿದ್ದಾರೆ.
ಫೆ.13ರಂದು ಹಾವೇರಿಯಲ್ಲಿ ವಿವಾಹ ನಡೆದಿತ್ತು. ಶನಿವಾರ ರಾತ್ರಿ ನವಲಗುಂದ ರಾಮಲಿಂಗೇಶ್ವರ ಕಾಮಣ್ಣನ ನೋಡಲು ತೆರಳಿದ್ದರು. ನಸುಕಿನ ಜಾವ ವಾಪಸ್ ಬರುವ ವೇಳೆ ರಸ್ತೆಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಗ್ಗಾಗಿದೆ. ತೀವ್ರವಾಗಿ ಗಾಯಗೊಂಡ ನವದಂಪತಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಸಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.