ಸವಣೂರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾದ ಜೋಡಿ. ನ್ಯಾಯಾಧೀಶ ಶ್ರೀನಿವಾಸ ಎಸ್.ಎನ್., ಇತರರಿದ್ದರು. 
ಹಾವೇರಿ

National Lok Adalat: ರಾಜಿ ಸಂಧಾನದಲ್ಲಿ 624 ಪ್ರಕರಣ ಇತ್ಯರ್ಥ

ಸವಣೂರ: ತಾಲೂಕು ಕಾನೂನು ಸೇವೆಗಳ ಸಮಿತಿ ನೇತೃತ್ವದಲ್ಲಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ 624 ಪ್ರಕರಣ ಸೇರಿದಂತೆ 22,75,080 ರೂ. ಮೊತ್ತದ ಪ್ರಕರಣ ಇತ್ಯರ್ಥಗೊಳಿಸಲಾಯಿತು.
ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ, ಜೆಎಂಎಫ್‌ಸಿ ನ್ಯಾಯಾಧೀಶ ಶ್ರೀನಿವಾಸ ಎಸ್.ಎನ್., ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 581 ಕ್ರಿಮಿನಲ್ ಪ್ರಕರಣ, 43 ಸಿವಿಲ್ ದಾವೆ ಸೇರಿದಂತೆ 624 ಪ್ರಕರಣಗಳಲ್ಲಿ 4 ಕ್ರಿಮಿನಲ್ ಮಿಸ್ಸೆನಿಯಸ್ ಅರ್ಜಿ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಕೆಪಿಯಾಕ್ಟ್‌ನ 517 ಪ್ರಕರಣ ಸೇರಿದಂತೆ 43,625 ರೂ. ಮೊತ್ತದ ಪ್ರಕರಣ ಹಾಗೂ ಜನನ-ಮರಣ 52 ಪ್ರಕರಣ, ಎನ್‌ಐಯ್ಯಕ್ಟ್‌ನಡಿ 8 ಪ್ರಕರಣ, ಸಿವಿಲ್ ದಾವೆಗಳಲ್ಲಿ 43 ಪ್ರಕರಣ ಇತ್ಯರ್ಥಗೊಳಿಸಲಾಯಿತು. ವ್ಯಾಜ್ಯ ಪೂರ್ವ ಒಟ್ಟು 17 ಪ್ರಕರಣ ಸೇರಿದಂತೆ ರಾಜಿ ಸಂಧಾನದ ಮೂಲಕ 15,11,800 ರೂ. ಮೊತ್ತದ ಪ್ರಕರಣ ಇತ್ಯರ್ಥ ಪಡಿಸಲಾಯಿತು.