ಮಾಲಿಂಗಜಯ ಬಸವರಾಜಪ್ಪ ಮಳವಳ್ಳಿ 
ಹಾವೇರಿ

Murder: ಕೊಲೆ ಹಿಂದಿದೆಯೇ ಜಮೀನು ಮಾರಿದ ಹಣ?

ಹಿರೇಕೆರೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಶುಕ್ರವಾರ ಮಧ್ಯರಾತ್ರಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಬಸವನಬೀದಿಯ ನಿವಾಸಿ ಮಾಲಿಂಗಜಯ ಬಸವರಾಜಪ್ಪ ಮಳವಳ್ಳಿ (41) ಹತ್ಯೆಯಾದವ.
ಮಾಲಿಂಗಜಯ ಮನೆಯಲ್ಲಿ ಚಿಲಕ ಹಾಕದೇ ಒಬ್ಬನೇ ಮಲಗಿದ ಸಂದರ್ಭದಲ್ಲಿ ಮಧ್ಯೆರಾತ್ರಿ ದುಷ್ಕರ್ಮಿಗಳು ಮುಂಬಾಗಿಲಿನಿಂದ ಒಳಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮೃತನಿಗೆ ಮಾತು ಬಾರದ ಓರ್ವ ಸಹೋದರಿ, ಸಹೋದರ ಇದ್ದಾರೆ. ಇವರ ಹೆಸರಿನಲ್ಲಿ ಒಟ್ಟು 22 ಎಕರೆ ಜಮೀನು ಇದ್ದು, ಇದನ್ನು ಎಕರೆಗೆ 22 ಲಕ್ಷ ರೂ.ಗಳಂತೆ ಮಾರಾಟ ಮಾಡಿದ್ದಾರೆ. ಇದರ  ಅಡ್ವಾಂನ್ಸ್ 25 ಲಕ್ಷ ರೂ. ಮೂವರ ಖಾತೆಗೆ ಜಮಾ ಆಗಿದೆ ಎಂದು ಹೇಳಲಾಗುತ್ತಿದೆ. ಇದೇ ಹಣದಲ್ಲಿ ಮಾಲಿಂಗಜಯ ತನ್ನ ಪರಿಚಯಸ್ಥರು, ಸ್ನೇಹಿತರೊಟ್ಟಿಗೆ ಪಾರ್ಟಿ ಮಾಡುತ್ತಿದ್ದ. ಇದರ ಸಲುವಾಗಿಯೇ ಹತ್ಯೆಯಾಗಿದೆ? ಮತ್ತೇ ಬೇರೆ ಕಾರಣ ಇದೇಯಾ ಎಂಬ ಮಾಹಿತಿ ಬಗ್ಗೆ ಪೊಲೀಸರು ತಡಕಾಡುತ್ತಿದ್ದಾರೆ. ಕೊಲೆ ಹಂತಕರ ಪತ್ತೆ ಈಗಾಗಲೇ ಪೊಲೀಸರು ಜಾಲಬೀಸಿ ಶೋಧ ನಡೆಸುತ್ತಿದ್ದಾರೆ. ಈ ಕುರಿತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.