ರಟ್ಟಿಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಸಭೆಲ್ಲಿ ಶಾಸಕ ಯು.ಬಿ.ಬಣಕಾರ ಮಾತನಾಡಿದರು. ವಸಂತ್ ದ್ಯಾವಕ್ಕಳವರ, ನಾರಾಯಣಪ್ಪ ಗೌರಕ್ಕನವರ, ಹನುಮಂತಗೌಡ ಭರಮಣ್ಣನವರ, ಪಿ.ಡಿ.ಬಸನಗೌಡ್ರು ಇತರರು ಇದ್ದರು. 
ಹಾವೇರಿ

MNREGA: ಕೇಂದ್ರದ ವಿರುದ್ಧ ಪ್ರತಿಭಟನಾ ಪಾದಯಾತ್ರೆ 28ರಂದು

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ
ನರೇಗಾ ಯೋಜನೆ ಬದಲಾವಣೆಯಿಂದ ಬಡ ಕೂಲಿಕಾರ್ಮಿಕರಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಕಾಯ್ದೆ ಬದಲಾಯಿಸಿದ ಕೇಂದ್ರ ಸರ್ಕಾರದ ವಿರುದ್ಧ ಫೆ.28ರಂದು ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಜಾರಿಗೊಂಡ ನರೇಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೇವಲ 7 ತಾಸು ಚರ್ಚೆ ಮಾಡಿ ಯೋಜನೆಯಲ್ಲಿನ ಮಹಾತ್ಮಗಾಂಧಿ ಹೆಸರನ್ನು ತೆಗೆದು ಹಾಕಿ ಅಪಮಾನ ಮಾಡಿದ್ದಾರೆ. ಈಗಾಗಲೇ ಈ ಬದಲಾವಣೆ ಖಂಡಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಫೆ.20 ರಂದು ಬೆಳಗ್ಗೆ 9 ಗಂಟೆಗೆ ತಾಲೂಕಿನ ಗುಂಡಗಟ್ಟಿ ಗ್ರಾಮದ ಶನೇಶ್ವರ ದೇವಸ್ಥಾನದಿಂದ ಸುಮಾರು 8 ಕಿಮೀ ಪ್ರತಿಭಟನಾ ಪಾದಯಾತ್ರೆ ಮೆರವಣಿಗೆ ನಡೆಯಲಿದೆ. ಇಂಗಳಗೊಂದಿ, ಸತ್ತಗಿಹಳ್ಳಿ ಮತ್ತು ಶಿರಗಂಬಿ ಮೂಲಕ ರಟ್ಟಿಹಳ್ಳಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ತಲುಪುತ್ತದೆ ಎಂದು ಹೇಳಿದರು.
ಪದಗ್ರಹಣ ಸಮಾರಂಭ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಸಂತ್ ದ್ಯಾವಕ್ಕಳವರ ನೇಮಕವಾಗಿದ್ದಾರೆ. ಇವರ ಪದಗ್ರಹಣ ಸಮಾರಂಭ ಫೆ.28ರಂದು ಮಧ್ಯಾಹ್ನ 2 ಗಂಟೆಗೆ ವೀರಭದ್ರಶ್ವೇರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಪ.ಪಂ.ಸದಸ್ಯರಾದ ಪಿ.ಡಿ. ಬಸನಗೌಡ್ರು, ವೀರನಗೌಡ್ರು ಪ್ಯಾಟಿಗೌಡ್ರು, ಸರ್ಪರಾಜ ಮಾಸೂರು, ಮಖಬುಲ್ಲಸಾಬ ಹಳಿಯಾಳ, ಕೆ.ಎಂ.ಎಫ್ ಮಾಜಿ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಮಲ್ಲಿಕಾರ್ಜುನ ಬುರಡಿಕಟ್ಟಿ, ಕಪಿಲಪೂಜಾರ, ಪರಮೇಶಪ್ಪ ಕಟ್ಟೇಕಾರ, ಬಾಬುಸಾಬ ಜಡದಿ, ಜಾಕೀರ ಮುಲ್ಲಾ, ವಿಜಯ ಅಂಗಡಿ, ಮಂಜಪ್ಪ ಅಸ್ವಾಲಿ, ಅಬ್ಬಾಸ ಗೋಡಿಹಾಳ ಇತರರಿದ್ದರು.