Crime 
ಹಾವೇರಿ

ಔಷಧ ತರಲು ಹೊರಟಿದ್ದ ಮಹಿಳೆ ಬಿದ್ದು ದುರ್ಮರಣ

ಹಾನಗಲ್ಲ: ವಿಟಿಎಸ್ ಎಕ್ಸೆಲ್ ವಾಹನದಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ತಿಳವಳ್ಳಿ ರಸ್ತೆಯಲ್ಲಿ ನಡೆದಿದೆ.

ತಿಳವಳ್ಳಿ ಗ್ರಾಮದ ಮಂಜುಳಾ ಭೀಮೋಜಿ ಮುಳಗುಂದ (36) ಮೃತ ಮಹಿಳೆ.

ಇವರು ತನ್ನ ಪತಿ ಭೀಮೋಜಿ ಜತೆ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಕುಳಿತು ಮನೆಯಿಂದ ಔಷಧದ ಅಂಗಡಿಗೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆ ಮಧ್ಯೆ ನಾಯಿ ಅಡ್ಡ ಬಂದಿದ್ದರಿಂದ ಬೈಕ್ ಕೆಳಗೆ ಬಿದ್ದು ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.