ಬ್ಯಾಡಗಿಯ ತಹಸೀಲ್ದಾರ್ ಆಯೋಜಿಸಿದ್ದ ರೈತ ದಿನಾಚರಣೆಯನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು. 
ಹಾವೇರಿ

ಬೇಡ್ತಿ-ವರದಾ ನದಿ ಜೋಡಣೆ ಶೀಘ್ರವಾಗಲಿ Bedi-Varada river linking

ವಿವೇಕಾನಂದ ದಾಸನಕೊಪ್ಪ
ಬೇಡ್ತಿ-ವರದಾ ಜೋಡಣೆಯಿಂದ ಹಾವೇರಿ, ಗದಗ, ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿರುವೆ. ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದಿಂದ ಡಿಪಿಆರ್ ಸಿದ್ಧಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ನೀರಾವರಿ ಯೋಜನೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ ಎಂದರು.
ಮಾಜಿ ಪ್ರಧಾನಿ ದಿ. ಚೌಧರಿ ಚರಣಸಿಂಗ್ ಅವರು 1970ರ ದಶಕದಲ್ಲಿ ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಳಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿದ್ದಾರೆ. ಹಸಿರು ಕ್ರಾಂತಿಯ ಬಳಿಕ ಆಹಾರ ಸಮಸ್ಯೆ ಇಲ್ಲವಾಗಿದೆ ಎಂದರು.
ರೇಷ್ಮೆ ವಿಸ್ತರ್ಣಾಧಿಕಾರಿ ಭಾರತಿ ನಾಯಕ ಮಾತನಾಡಿದರು. ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಉಕ್ಕುಂದ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಬೆನಕನಕೊಂಡ, ಶಂಕರಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಬಸವರಾಜ ಸಂಕಣ್ಣನವರ, ತಹಸೀಲ್ದಾರ ಚಂದ್ರಶೇಖರ ನಾಯಕ, ದಾನಪ್ಪ ಚೂರಿ, ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಕೃಷ್ಣ ನಾಯಕ, ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ, ನಾಗರಾಜ ಬನ್ನಿಹಟ್ಟಿ, ತಾಂತ್ರಿಕ ಅಧಿಕಾರಿ ಎನ್.ಬಿ. ಕಾಕೋಳ, ಗುಡ್ಡಪ್ಪ ಅರಳೀಕಟ್ಟಿ ಇತರರಿದ್ದರು.