Crime 
ಹಾವೇರಿ

ಮದುವೆ ಆಮಂತ್ರಣ ಕೊಡಲು ಹೊರಟವಳು ಮಸನಕ್ಕೆ

ಹಾವೇರಿ: ಬೈಕ್ಗೆ ಕಾರು ಡಿಕ್ಕಿಯಾಗಿ ಬೈಕ್ ಹಿಂದೆ ಕುಳಿತ್ತಿದ್ದ ಮಹಿಳೆ ಮೃತಪಟ್ಟ ಘಟನೆ ತಾಲೂಕಿನ ಎಂ.ಜಿ. ತಿಮ್ಮಾಪುರ ಬಳಿ ನಡೆದಿದೆ.

ಕಳ್ಳಿಹಾಳ ಗ್ರಾಮದ ರೇಖಾ ರವೀಂದ್ರ ಗೊಣೇಪ್ಪನವರ ಮೃತ ಮಹಿಳೆ.

ಇವರು ಈಕೆ ಸಂಬಂಧಿಕರ ಮದುವೆ ಆಮಂತ್ರಣ ಪತ್ರಿಕೆ ಕೊಡುವ ಸಲುವಾಗಿ ಬೈಕ್ ಮೇಲೆ ಹೊನ್ನತ್ತಿ ಗ್ರಾಮದಿಂದ ತಿಮ್ಮಾಪುರಕ್ಕೆ ತೆರಳುತ್ತಿದ್ದರು. ಈ ಸಮಯದಲ್ಲಿ ದಾರಿ ಮಧ್ಯೆ ಕಾರು ಚಾಲಕ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ರೇಖಾ ಸ್ಥಳದಲ್ಲಿಯೆ ಮೃತಪಟ್ಟಿದ್ದಾಳೆ. ಘಟನೆ ಬಳಿಕ ಕಾರು ಚಾಲಕ ಕಾರು ಬಿಟ್ಟು ಓಡಿ ಹೋಗಿದ್ದಾನೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.