ಬಂಕಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗೋವಿನಜೋಳದ ಬೆಳೆ (Maize crop) ಬೆಂಕಿಗಾಹುತಿಯಾಗಿರುವುದು. 
ಹಾವೇರಿ

Maize crop ಗೋವಿನಜೋಳ ಬೆಳೆ ಬೆಂಕಿಗಾಹುತಿ

ಬಂಕಾಪುರ: ಆಕಸ್ಮಿಕ ಬೆಂಕಿ ತಗುಲಿ ಗೋವಿನಜೋಳ ಬೆಳೆ (Maize crop) ಹಾನಿಗೀಡಾದ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-48ರ ಹತ್ತಿರ ಬುಧವಾರ ಸಂಭವಿಸಿದೆ.
ಪಟ್ಟಣದ ಮಲ್ಲಪ್ಪ ಸಂಶಿ ಅವರ ಮಕ್ಕಳಿಗೆ ಸಂಬಂಧಿಸಿದ 4 ಎಕರೆಯಷ್ಟು ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಗೋವಿನಜೋಳ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಅವಡ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಿಗ್ಗಾಂವಿ ಅಗ್ನಿಶಾಮಕ ದಳ ಸಿಬ್ಬಂದಿ, ಬೆಂಕಿ ಹತೋಟಿಗೆ ತಂದು ಸಂಭವಿಸಬಹುದಾಗಿದ್ದ ಹೆಚ್ಚಿನ ಹಾನಿ ತಡೆದಿದ್ದಾರೆ.
ಘಟನಾ ಸ್ಥಳಕ್ಕೆ ಬಂಕಾಪುರ ಕಂದಾಯ ನಿರೀಕ ಶಶಿಕಾಂತ ಖೋತ, ಗ್ರಾಮ ಆಡಳಿತಾಧಿಕಾರಿ ಈರಣ್ಣ ನಂದಿ, ಶಿವಾನಂದ ಮನವಳ್ಳಿ ಭೇಟಿ ಪರಿಶೀಲನೆ ನಡೆಸಿದರು.