Leopard ರಟ್ಟಿಹಳ್ಳಿ ತಾಲೂಕಿನ ಮೇದೂರು ಗ್ರಾಮದ ಹೊರವಲಯದ ಪ್ರಕಾಶಗೌಡ ಪಾಟೀಲ ಅವರ ತೋಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದರು.
ರಟ್ಟಿಹಳ್ಳಿ: ತಾಲೂಕಿನ ಮೇದೂರು ಗ್ರಾಮದ ಹೊರವಲಯದ ತೋಟವೊಂದರಲ್ಲಿ ಶನಿವಾರ ರಾತ್ರಿ ಚಿರತೆ (Leopard) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಪ್ರಕಾಶಗೌಡ ಪಾಟೀಲ ಅವರ ತೋಟದಲ್ಲಿ ಚಿರತೆ ಓಡಾಡಿದ್ದು, ತೋಟದ ಮನೆ ಆವರಣದಲ್ಲಿದ್ದ ನಾಲ್ಕು ನಾಯಿ ಪೈಕಿ ಒಂದನ್ನು ಚಿರತೆ ದಾಳಿ ಮಾಡಿ, ಎತ್ತಿಕೊಂಡು ಹೋಗಿದೆ. ಚಿರತೆಯು ನಿಧಾನವಾಗಿ ಮನೆ ಆವರಣಕ್ಕೆ ನುಗ್ಗಿ, ನಾಯಿಯನ್ನು ಬೇಟೆಯಾಡಿ ಣಮಾತ್ರದಲ್ಲಿ ಅಲ್ಲಿಂದ ಓಡಿ ಹೋಗುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಗ್ರಾಮ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಜನರು ಭಯಭೀತರಾಗಿದ್ದಾರೆ. ರೈತರು, ಕೂಲಿ ಕಾಮಿರ್ಕರು ರಾತ್ರಿ ಮತ್ತು ಬೆಳಗ್ಗೆ ವೇಳೆ ಜಮೀನಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಚಿರತೆಯು ಜನ& ಜಾನುವಾರುಗಳ ಮೇಲೆ ದಾಳಿ ಮಾಡಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ: ಮಾಹಿತಿ ತಿಳಿದು ಭಾನುವಾರ ಬೆಳಗ್ಗೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಂಡೇಬಾಗೂರಿನಲ್ಲಿಯೂ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ, ಒಂದೆರೆಡು ದಿನ ಕಾಯ್ದು ಯಾವ ಭಾಗದಲ್ಲಿ ಮತ್ತೆ ಚಿರತೆ ಕಾಣಿಸಿಕೊಳ್ಳುತ್ತದೆಯೋ ಆ ಸ್ಥಳದ ಹತ್ತಿರ ಬೋನು ಇರಿಸಿ ಚಿರತೆ ಸೆರೆ ಹಿಡಿಯಲಾಗುವುದು ಎಂದು ಆರ್ಎ್ಒ ವಿಜಯಕುಮಾರ ಮೂಡಬಾಗಿಲ ತಿಳಿಸಿದ್ದಾರೆ.