ಹಿರೇಕೆರೂರ ತಾಲೂಕಿನ ಅಬಲೂರು ಗ್ರಾಮದಲ್ಲಿ ಮನು ವಿಕಾಸ ಸಂಸ್ಥೆಯಿಂದ ಕೈಗೊಂಡಿರುವ ಗೇರುಕಟ್ಟೆ ಕೆರೆ ಹೂಳೆತ್ತುವ ಕಾರ್ಯಕ್ಕೆ ಮಾಜಿ ಸಚಿವ ಬಿ.ಸಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ರವಿಶಂಕರ ಬಾಳಿಕಾಯಿ, ಉಜ್ಜನಗೌಡ ಮಳವಳ್ಳಿ, ಬಸವರಾಜ ಮಳವಳ್ಳಿ, ಶಂಕ್ರಪ್ಪ ಗೌಡ್ರ, ಜಗದೀಶ ದೊಡ್ಡಗೌಡ್ರ ಇದ್ದರು.
ಹಿರೇಕೆರೂರ: ಕೆರೆ ಕಟ್ಟೆಗಳು ರೈತರ ಜೀವನಾಡಿಯಾಗಿದ್ದು, ಕೆರೆಗಳು ತುಂಬಿದಾಗ ರೈತರ ಬದುಕಿಗೆ ಹಸನಾಗುವ ಜತೆಗೆ ಅಂತರ್ಜಲ ಮಟ್ಟ ಅಧಿಕವಾಗಲು ಅನುಕೂಲವಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಅಬಲೂರು ಗ್ರಾಮದಲ್ಲಿ ಮನು ವಿಕಾಸ ಸಂಸ್ಥೆಯಿಂದ ಕೈಗೊಂಡಿರುವ ಕೆರೆ ಹೂಳೆತ್ತುವ ಕಾರ್ಯಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಂದು ಅತಿವೃಷ್ಟಿ, ಅನಾವೃಷ್ಟಿ, ಕಡಿಮೆ ಇಳುವರಿ, ಬೆಲೆ ಕುಸಿತದಂತಹ ಸಂಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಿ ಅವರ ಕೃಷಿಗೆ ಪೂರರಕವಾಗುವಂತಹ ಕಾರ್ಯಗಳನ್ನು ಕೈಗೊಂಡಾಗ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ. ಅದಕ್ಕೆ ಪೂರಕ ಎಂಬಂತೆ ಕೆರೆ ಹೊಳೆತ್ತುವುದು ಅತೀ ಮಹತ್ವದ ಕಾರ್ಯವಾಗಿದೆ. ಇದರಿಂದ ಫಲವತ್ತಾದ ಮಣ್ಣನ್ನು ತಮ್ಮ ಜಮೀನುಗಳಲ್ಲಿ ಹಾಕಿಸಿಕೊಳ್ಳುವುದರಿಂದ ತಮ್ಮ ಭೂಮಿಯ ಫಲವತ್ತತೆ ಹೆಚ್ಚಳವಾಗುತ್ತದೆ ಮತ್ತು ಹೊಳು ತುಂಬಿರುವ ಕೆರೆಗಳಲ್ಲಿ ಅದನ್ನು ತೆಗೆಯುವುದರಿಂದ ನೀರಿನ ಸಂಗ್ರಹ ಅಧಿಕವಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ಸುತ್ತಲಿನ ಕೊಳವೆಬಾವಿಗಳ ನೀರಿನ ಮಟ್ಟ ಅಧಿಕವಾಗುತ್ತದೆ. ಕೆರೆಗಳಲ್ಲಿ ಸದಾ ಕಾಲ ನೀರು ಇರುವುದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಗ್ರಾಪಂ ಸದಸ್ಯ ಉಜ್ಜನಗೌಡ ಮಳವಳ್ಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮಳವಳ್ಳಿ, ಶಂಕ್ರಪ್ಪ ಗೌಡ್ರ, ಜಗದೀಶ ದೊಡ್ಡಗೌಡ್ರ, ನಾಗೇಂದ್ರಪ್ಪ ಮಳವಳ್ಳಿ, ಚಿದನಾಂದಸ್ವಾಮಿ ಆರಾಧ್ಯಮಠ, ಶಾಂತಯ್ಯ ಈರಮ್ಮನವರ, ಶಿವಾನಂದ ಮಳವಳ್ಳಿ, ಮುತ್ತಪ್ಪ ಕುಬಸದ, ಕರಬಸಪ್ಪ ಮಳವಳ್ಳಿ, ಯಲ್ಲಪ್ಪ ರಡ್ಡೇರ, ಪಾಲಾಕ್ಷಪ್ಪ ಗುಳಲಕಾಯಿ, ಪರಮೇಶಯ್ಯ ಈರಮ್ಮನವರ, ಅಶೋಕ ಆಡೂರ, ಜಗದೀಶ ಮಳವಳ್ಳಿ, ಚನ್ನಯ್ಯ ಆರಾಧ್ಯಮಠ, ವೀರಭದ್ರಯ್ಯ ಹಿರೇಮಠ, ಮರುಳಶಿದ್ದೇಶ ಮಳವಳ್ಳಿ, ವಿರೇಶ ಗೌಡ್ರ, ಜಯಚಂದ್ರ ಮಳವಳ್ಳಿ, ಷಣ್ಮುಖಯ್ಯ ಆರಾಧ್ಯಮಠ, ರಮೇಶ ಚಿನ್ನಿಕಟ್ಟಿ, ಚಂದ್ರು ದೊಡ್ಮನಿ, ನವೀನ್ ಮಳವಳ್ಳಿ, ಚನಬಸಯ್ಯ ಈರಮ್ಮನವರ, ಸುರೇಶ ಹರಿಜನ, ಮುರಡಪ್ಪ ಮಳವಳ್ಳಿ ಇತರರಿದ್ದರು.