B.ed ranks 
ಹಾವೇರಿ

ಬಿ.ಇಡಿಯಲ್ಲಿ ಕುಮಾರೇಶ್ವರ ಶಿಕ್ಷಣ ಕಾಲೇಜ್​ಗೆ 7 ರ‍್ಯಾಂಕ್

ಹಾನಗಲ್ಲ: ಹಾವೇರಿ ವಿಶ್ವವಿದ್ಯಾಲಯದ ಬಿ.ಇಡಿ (B.Ed ranks) ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ 8 ಪ್ರಶಿಕ್ಷಣಾರ್ಥಿಗಳು 7 ರ‍್ಯಾಂಕ್ ಪಡೆದು ಮೊದಲ ಘಟಿಕೋತ್ಸವದಲ್ಲೇ ಇತಿಹಾಸ ನಿರ್ವಿುಸಿದ್ದಾರೆ.
ಪಟ್ಟಣದ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ 2025ನೇ ಸಾಲಿನ ಬಿ.ಇಡಿ ಫಲಿತಾಂಶ ಶೇ. 100 ಆಗಿದೆ. ಒಟ್ಟು 48 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ನಾಗಲಕ್ಷ್ಮೀ ಬೇವಿನಮರದ ಶೇ. 93.93 ಅಂಕದೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಕ್ಷತಾ ಹೊನ್ನಪ್ಪ ಲೆಂಕಮ್ಮನವರ (ಶೇ. 93.63) ದ್ವಿತೀಯ ರ್ಯಾಂಕ್, ಸೋಮಕ್ಕ ಪೂಜಾರ (ಶೇ. 93.29) ತೃತೀಯ, ಅನ್ನಪೂರ್ಣ ಜಿ. (ಶೇ. 93) ಚತುರ್ಥ, ಅಮೃತ ಎಂ. (ಶೇ. 92.96) ಐದನೇ, ಅನ್ನಪೂರ್ಣ ಸುಣಗಾರ (ಶೇ. 92.88) ಏಳನೇ, ಆಶಾ ವಿ.ಎಸ್. ಹಾಗೂ ಈ. ಕೀರ್ತಿ (ಶೇ. 92.71) 9ನೇ ರ‍್ಯಾಂಕ್ ಗಳಿಸಿದ್ದಾರೆ. ಉಳಿದೆಲ್ಲ ವಿದ್ಯಾರ್ಥಿಗಳು ಉನ್ನತ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರ‍್ಯಾಂಕ್ ವಿಜೇತರೆಲ್ಲರೂ ವಿದ್ಯಾರ್ಥಿನಿಯರೇ ಆಗಿದ್ದಾರೆ ಎಂಬುದು ವಿಶೇಷ.
1986ರಲ್ಲಿ ಕುಮಾರೇಶ್ವರ ಬಿ.ಇಡಿ ಕಾಲೇಜು ಆರಂಭವಾಗಿದ್ದು, ಈವರೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಒಟ್ಟು 27 ರ‍್ಯಾಂಕ್ ಲಭಿಸಿವೆ. ಈಗ ಕಾಲೇಜು ಹಾವೇರಿ ವಿಶ್ವವಿದ್ಯಾಲಯಕ್ಕೆ ಸೇರಿದೆ.
ಹಾವೇರಿ ವಿವಿ ಮೊದಲ ಘಟಿಕೋತ್ಸವದಲ್ಲೇ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ 8 ಬಿ.ಇಡಿ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ. ವಿಶ್ವವಿದ್ಯಾಲಯದ 10 ರ‍್ಯಾಂಕ್ಲ್ಲಿ 7 ರ‍್ಯಾಂಕ್ ಈ ಕಾಲೇಜಿನ ಮುಡಿಗೇರಿವೆ.