ರಾಣೆಬೆನ್ನೂರು: ದೀರ್ಘ ಕಾಲದಿಂದ ನೆನಗುದಿಗೆ ಬಿದ್ದಿರುವ ನಗರದ ಕರ್ನಾಟಕ ಗೃಹಮಂಡಳಿಯ 1ನೇ ಹಂತದ ಬಡಾವಣೆಯ ಅಭಿವೃದ್ಧಿಗೆ 6.82 ಕೋಟಿ ರೂ. ಬಿಡುಗಡೆಯಾಗಿದ್ದು, ಅದಕ್ಕೆ ಹೆಚ್ಚುವರಿಯಾಗಿ ನಗರಸಭೆಯಿಂದ 50 ಲಕ್ಷ ರೂ. ಬಿಡುಗಡೆ ಮಾಡಿ ಸಂರ್ಪೂಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಪ್ರಕಾಶ ಕೋಳವಾಡ ಹೇಳಿದರು.
ನಗರದ ಕೆಎಚ್ಬಿ ಕಾಲನಿಯಲ್ಲಿ ಗುರುವಾರ ಏರ್ಪಡಿಸಿದ್ದ ನಿವಾಸಿಗಳ ಕುಂದುಕೊರತೆ ನಿವಾರಣಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸುವ ಎಲ್ಲ ಪ್ರಕ್ರಿಯೆಗಳು ಮುಕ್ತಾಯ ಹಂತದಲ್ಲಿದ್ದು, ಅತೀ ಶೀಘ್ರದಲ್ಲಿಯೇ ಹಸ್ತಾಂತರಿಸಿ ಬಡಾವಣೆಯ ಸುಧಾರಣೆಯ ಕಾಮಗಾರಿ ಆರಂಭಿಸಲಾಗುವುದು ಎಂದರು.
ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ನಗರದ ಕೆ.ಎಚ್.ಬಿ. 1ನೇ ಹಂತದ ಬಡಾವಣೆಯು ಅತ್ಯಂತ ಪ್ರಾಶಸ್ತ ಹಾಗೂ ಪಶಾಂತ ವಾತಾವರಣದಲ್ಲಿದ್ದು ಚೆನ್ನಾಗಿ ಅಭಿವೃದ್ಧಿಯಾದರೆ ಇಡೀ ನಗರಕ್ಕೆ ಭೂಷಣ ತರುವ ಬಡಾವಣೆ ಇದಾಗಲಿದೆ. ಶಿಥಿಲಗೊಂಡಿರುವ ರಸ್ತೆ, ಗಟಾರ, ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಪುನರ್ ಸ್ಥಾಪಿಸಿ ವಿದ್ಯುದ್ದಿಕರಣ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೊಟಗಿ, ಕರ್ನಾಟಕ ಗೃಹಮಂಡಳಿಯ ಜಿಲ್ಲಾ ಘಟಕದ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಸೀತಾರ ವೈ.ಎನ್., ಸಹಾಯಕ ಇಂಜಿನಿಯರ್ ಹುಸೇನ್ಬಿ ಸೌಹಾದ, ಪ್ರಮುಖರಾದ ಆರ್.ಎಸ್. ಪಾಟೀಲ, ವಿರುಪಾಕ್ಷಪ್ಪ ಅರವಂಟಗಿ, ಶ್ರೀನಿವಾಸ ಲದ್ವಾ, ಎ.ಬಿ. ರತ್ನಮ್ಮ, ಬಸವರಡ್ಡಿ ಬಣಕಾರ, ಎಸ್.ಕೆ. ದಾಸರಡ್ಡಿ, ಅಶೋಕ ಸೂರಗೊಂಡ, ಎಂ.ಜೆ. ಹಿತ್ತಲಮನಿ, ಕಾಂತೇಶ ದೇವರಗುಡ್ಡ, ರ್ಪೂಣಿಮಾ ಲದ್ವಾ ಮತ್ತಿತರರು ಉಪಸ್ಥಿತರಿದ್ದರು.