ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,
ಹಾನಗಲ್ಲ: ಹಾನಗಲ್ಲ ತಾಲೂಕಿನ ಕೋಡಿಯಲ್ಲಾಪುರ, ಆಂಧ್ರಪ್ರದೇಶದ ಮುಪ್ಪಲಕುಂಟೆ, ದಾವಣಗೆರೆ ಜಿಲ್ಲೆಯ ಕಣ್ವಕುಪ್ಪೆಯ ಮಠಾಧೀಶರಾದ ಷಟಸ್ಥಲಬ್ರಹ್ಮ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕೇದಾರ ಪೀಠದ ಜಗದ್ಗುರುಗಳಾಗಿ ನಿಯುಕ್ತಿಗೊಂಡಿದ್ದಾರೆ.
ಗುರುವಾರ ಮಹಾರಾಷ್ಟ್ರದ ನಾಂದೇಡದಲ್ಲಿ ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ 25ನೇ ಪಟ್ಟಾಧಿಕಾರ ರಜತಮಹೋತ್ಸವದ ಸಂದರ್ಭದಲ್ಲಿ ಡಾ.ನಾಲ್ವಡಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕೇದಾರ ಪೀಠದ ಜಗದ್ಗುರುಗಳನ್ನಾಗಿ ಘೋಷಣೆ ಮಾಡಲಾಗಿದೆ.
ಜಗದ್ಗುರುಗಳಾಗಿ ನಿಯುಕ್ತಿಗೊಂಡಿರುವುದಕ್ಕೆ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಜಿಪಂ ಮಾಜಿ ಸದಸ್ಯ ಎನ್.ಬಿ. ಪೂಜಾರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ತಾಪಂ ಮಾಜಿ ಸದಸ್ಯ ಸಿದ್ದನಗೌಡ ಪಾಟೀಲ, ಎಂ.ಕೆ. ಅರಳಲೆಮಠ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಾನಂದ ಸಂಗೂರಮಠ, ರಾಜಣ್ಣ ಬೆಟಗೇರಿ, ಶಿವಬಸವ ಪೂಜಾರ, ಚಂದ್ರಣ್ಣ ನಿಕ್ಕಂ ಹಾಗೂ ಹಾನಗಲ್ಲ ತಾಲೂಕಿನ ಕೋಡಿಯಲ್ಲಾಪುರ ಮಠದ ಸದ್ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.