ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಆಯೋಜಿಸಿದ್ದ Kannada language ಕವಿಗೋಷ್ಠಿಯನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು. ರತ್ನವ್ವ ಜೋಗಿಹಳ್ಳಿ, ಲಲಿತಾ ಗೊಗ್ಗದ, ಎಂ.ಕೆ. ಹೊಳಜೋಗಿ, ಸುರೇಶ ಹೊಳಜೋಗಿ, ಬಸವರಾಜ ಜಾಡರ ಉಪಸ್ಥಿರಿತರಿದ್ದರು.
ರಟ್ಟಿಹಳ್ಳಿ: ಸಾಹಿತ್ಯಕ್ಕೆ ಅನೇಕ ಕವಿಗಳು ಅಪಾರ ಕೊಡುಗೆ ನೀಡಿ, ಕನ್ನಡ ಭಾಷೆಯ ಶ್ರೀಮಂತಿಕೆ (Kannada language) ಇಮ್ಮಡಿಗೊಳಿಸಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಹಂಸ ಪ್ರತಿಷ್ಠಾನ ಹಾಗೂ ಶ್ರೀ ವೀರಮಹೇಶ್ವರ ಪ್ರೌಢಶಾಲೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜ್ಞಾನದ ಬೇರುಗಳು ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಯುವಪೀಳಿಗೆ ಮೊಬೈಲ್ ೋನ್ಗಳಿಂದ ದೂರವಿರಬೇಕು. ಸಾಹಿತ್ಯ ಅಧ್ಯಯನದಿಂದ ಜ್ಞಾನ ಸಂಪಾದನೆ ಹೆಚ್ಚಾಗುತ್ತದೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, ಸಾಹಿತಿ ಬಸವರಾಜ ಜಾಡರ ಮತ್ತು ಜೆ.ಸಿ. ಹೊಸರಾಯಪ್ಪನವರ ಅವರು ಜ್ಞಾನದ ಬೇರುಗಳು ಸಂಪಾದಕೀಯ ಕೃತಿ ಮೂಲಕ ಜಿಲ್ಲೆಯ 36 ಕವಿಗಳ ತಲಾ 2 ಕವನ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಈ ಎಲ್ಲ ಕವನಗಳು ಸಾಮಾಜಿಕ ಬದ್ಧತೆ ಒಳಗೊಂಡಿವೆ ಎಂದರು.
ಉಪನ್ಯಾಸಕ ಶೇಖರ ಭಜಂತ್ರಿ ಅವರು ಕೃತಿ ವಿಮಶಿರ್ಸಿದರು. ಹಾಲನಗೌಡ ಕುಪ್ಪೇಲೂರು ಅಧ್ಯತೆ ವಹಿಸಿದ್ದರು.
2024ನೇ ಸಾಲಿನ ಹಂಸಕಥಾ ಪುರಸ್ಕಾರವನ್ನು ಪ್ರವಿಣಕುಮಾರ ಜಿ. ಅವರಿಗೆ ನೀಡಲಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸತ ಸಾಹಿತಿ ಸುರೇಶ ಮಲ್ಲಾಡದ ಅವರನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಗ್ರಾಮದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಕನ್ನಡ ತೇರು ಎಳೆಯಲಾಯಿತು. ಮಧ್ಯಾಹ್ನ ಕಥಾ ಪುರಸ್ಕಾರ ಮತ್ತು ಕವಿಗೋಷ್ಠಿ ಜರುಗಿದವು.
ಕಬ್ಬಿನಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂ.ಸಿ. ತುಮ್ಮಿನಕಟ್ಟಿ, ಪ್ರಾಚಾರ್ಯ ಎ.ಜಿ. ರಾವೇಂದ್ರ, ಸಾಹಿತಿ ಬಸವರಾಜ ಜಾಡರ, ಸುರೇಶ ಕುಮಾರ, ಪ್ರಭುಗೌಡ ಮರಿಗೌಡ್ರು, ಹೇಮಣ್ಣ ಮುದರೆಡ್ಡೇರ, ಬಸನಗೌಡ ಕರೇಗೌಡ್ರ, ಎಸ್.ಬಿ. ಪಾಟೀಲ, ಡಿ.ಆರ್. ಪಾಟೀಲ, ಬಿ.ಪಿ. ಶಿಡೇನೂರು, ಜಿ.ಜಿ. ಕಮ್ಮಾರ, ಸುರೇಕಾ ಕುರುಂದ್ವಾಡ, ಮಲ್ಲಿಕಾರ್ಜುನ ಹೇರಕರ, ಡಿ. ಚಂದ್ರಶೇಕರ, ಶಂಕರಗೌಡ ಕುಪ್ಪೇಲೂರು, ಚೇತನಕುಮಾರ ಬಣಕಾರ, ಮಂಜು ಮಾಳಗಿ, ಎಂ.ಆರ್. ಕಟಗಿ, ರವಿಕುಮಾರ ನೀಹಾ, ಎಂ.ಕೆ. ಹೊಳಜೋಗಿ, ಕೆ.ಆರ್. ಕೋಣ್ತಿ, ಕುಸಮಾವತಿ ಮೇಗಳಮನಿ, ಶಾಂತಾ ಬತ್ತೇರ, ಇತರರು ಉಪಸ್ಥಿತರಿದ್ದರು.