ಬ್ಯಾಡಗಿ ತಾಲೂಕಿನ ಕದರಮಂಡಲಗಿ ಮನೆಯೊಂದರಲ್ಲಿ ಕಳವು ಮಾಡಿದ ಚಿನ್ನ, ಬೆಳ್ಳಿ ವಶಪಡಿಸಿಕೊಂಡ ಪೊಲೀಸರು. 
ಹಾವೇರಿ

ಆಭರಣ ಕಳವು ಮಾಡಿದ್ದವನ ಬಂಧನ

ವೀರೇಶ ಸೌದ್ರಿ
ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಮನೆಯೊಂದರಲ್ಲಿ ಚಿನ್ನ, ಬೆಳ್ಳಿ ಆಭರಣ ಕಳವು ಮಾಡಿದ್ದ ಅಪ್ರಾಪ್ತನನ್ನು ಮಂಗಳವಾರ ಬಂಧಿಸಲಾಗಿದೆ. 
 ಜ. 8ರಂದು ಕದರಮಂಡಲಗಿ ಗ್ರಾಮದ ಮನೆಯೊಂದರಲ್ಲಿ ಗಾಡ್ರೇಜು ಒಡೆದು ಅದರಲ್ಲಿದ್ದ 13 ಲಕ್ಷ ರೂ. ಮೌಲ್ಯದ ಬೆಳ್ಳಿ, ಬಂಗಾರ ಕಳ್ಳತನವಾಗಿತ್ತು. ಎಸ್ಪಿ ಯಶೋಧಾ ವಂಟಗೋಡಿ, ಹೆಚ್ಚುವರಿ ಅಧೀಕ್ಷಕ ಲಕ್ಷಣ ಶಿರಕೋಳ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು  ಪತ್ತೆ ಮಾಡಿ ಬಂಧಿಸಲಾಗಿದೆ. ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ, ಸಿಪಿಐ ಎಂ.ಬಿ. ಚಿಕ್ಕಣ್ಣನವರ, ಪಿಎಸ್‌ಐ ಭಾರತಿ ಕುರಿ, ಎಎಸ್‌ಐ ಎನ್.ಕೆ. ನಿಂಗಣ್ಣನವರ, ಯು.ಬಿ.ನಂದಿಗೌಡ್ರ, ಬಸವರಾಜ ಅಂಜುಟಗಿ, ಸಿಬ್ಬಂದಿ ಇದ್ದರು.