ಹಾನಗಲ್ಲ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ತಾಲೂಕು ಜೆಡಿಎಸ್ ಘಟಕದಿಂದ ಮಂಗಳವಾರ ಧರಣಿ ನಡೆಸಲಾಯಿತು. ರಾಮನಗೌಡ ಪಾಟೀಲ, ಮೂಕಪ್ಪ ಪಡೆಪ್ಪನವರ, ಅಣ್ಣಪ್ಪ ಚಾಕಾಪುರ, ವೀರೇಶ ಕುಬಕಡ್ಡಿ, ಶೇಖಣ್ಣ ಗಾಣಿಗೇರ ಇತರರಿದ್ದರು. 
ಹಾವೇರಿ

ಹಾನಗಲ್ಲ ತಹಸೀಲ್ದಾರ್ ಕಚೇರಿಯೆದುರು ಜೆಡಿಎಸ್ ಧರಣಿ

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ಹಾನಗಲ್ಲ: ಪ್ರತಿ ರೈತರಿಗೆ ೨೫ ಸಾವಿರ ರೂ. ಬರ ಪರಿಹಾರ, ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿಗೆ ತಡೆ, ಮಾವು, ಅಡಕೆ ಬೆಳೆವಿಮೆ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ತಾಲೂಕು ಜೆಡಿಎಸ್ ಘಟಕದಿಂದ ಮಂಗಳವಾರ ಧರಣಿ ನಡೆಸಲಾಯಿತು.

ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ, ರೈತರ ಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಽಕಾರಿಗಳು ಜನಪ್ರತಿನಿಽಗಳು ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ. ಹಲವು ತಿಂಗಳಿನಿಂದ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಬಿಡುಗಡೆಯಾಗಿಲ್ಲ. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾಗಿಲ್ಲ. ಬರಗಾಲ ಘೋಷಣೆ ಹಾಗೂ ಬೆಳೆ ವಿಮೆ ನಿಗದಿಪಡಿಸುವಲ್ಲಿ ಸರಿಯಾದ ಪರಿಶೀಲನೆ ಆಗದೇ ರೈತರಿಗೆ ಅನ್ಯಾಯವಾಗಿದೆ. ಈ ಎಲ್ಲ ಸಮಸ್ಯೆಗಳಿಗೂ ಈಗಲೇ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರು, ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಽಕಾರಿಗಳು ನ. ೧೨ ರವರೆಗೆ ಕಾಲಾವಕಾಶ ಕೋರಿದ್ದಾರೆ. ಇದನ್ನು ಪರಿಗಣಿಸಿ ಪ್ರತಿಭಟನೆ ನಿಲ್ಲಿಸಲಾಗಿದೆ. ಗಡುವಿನೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ತಹಸೀಲ್ದಾರ್ ಕಚೇರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ, ಗ್ರೇಡ್-೨ ತಹಸೀಲ್ದಾರ್ ಪ್ರಭಾಕರ ದೊಡ್ಡಮನಿ, ತೋಟಗಾರಿಕೆ ಇಲಾಖೆ ಅಽಕಾರಿ ವೀರಭದ್ರಸ್ವಾಮಿ ಮನವಿ ಸ್ವೀಕರಿಸಿದರು.

ಮೂಕಪ್ಪ ಪಡೆಪ್ಪನವರ, ಅಣ್ಣಪ್ಪ ಚಾಕಾಪುರ, ವೀರೇಶ ಕುಬಕಡ್ಡಿ, ಶೇಖಣ್ಣ ಗಾಣಿಗೇರ, ರವೀಂದ್ರ ಹೋತನಹಳ್ಳಿ, ಎಂ.ಎ. ಬಾರ್ಕಿ, ಪ್ರಕಾಶ ಕೊಂಡೋಜಿ, ಬಸಪ್ಪ ಗಂಜೀಗಟ್ಟಿ, ಸಿದ್ದಪ್ಪ ಮಾಯಕ್ಕನವರ, ಸಾದಿಕ್ ಅಕ್ಕಿವಳ್ಳಿ, ಮೈಲಾರಪ್ಪ ತಳವಾರ, ಬಸವರಾಜ ಶಿವಣ್ಣನವರ, ನೀಲಪ್ಪ ಬಾರ್ಕಿ, ದೇವಿಂದ್ರಪ್ಪ ಸೋಮಾಪುರ, ಚಂದ್ರಪ್ಪ ಮಾಳಣ್ಣನವರ, ಗದಿಗೆಪ್ಪ ತಳವಾರ, ದೇವಿಂದ್ರ ಮಂಟೂರ, ಮೂಕಪ್ಪ ಬಾರ್ಕಿ ಇದ್ದರು.